ಹುಬ್ಬಳ್ಳಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳ ದಾಖಲೆಗಳು ಸರಿಯಾಗಿದ್ದರೂ ಕೂಡ ಪೊಲೀಸ್ ಇಲಾಖೆಯವರು ವಾಹನ ಸವಾರರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಮಹಾರಾಷ್ಟ್ರ ಮೂಲದ ವಾಹನ ಸವಾರೋನೊಬ್ಬ ಪೊಲೀಸ್ ಕಿರುಕುಳವನ್ನು ವಿಡಿಯೋ ಮಾಡಿ ಹರಿಬಿಟ್ಟಿದ್ದಾನೆ.ಹುಬ್ಬಳ್ಳಿಯ ಗಬ್ಬೂರ ಬೈಪಾಸ್ ಬಳಿ ಪೊಲೀಸ್ ಇಂಟೆರ್ ಸೆಪ್ಟರನಲ್ಲಿ ಬಂದಿರುವ ಪೊಲೀಸರು ವಾಹನದ ಮೂಲ ದಾಖಲೆಗಳು ಸರಿಯಾಗಿದ್ದರೂ ಕೂಡ ಎರಡು ಸಾವಿರ ರೂಪಾಯಿ ಹಣ ಪಡೆದು ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ. ವಾಹನಗಳ ದಾಖಲೆ ಪರಿಶೀಲಿಸುವ ಬದಲಿಗೆ ಸುಲಿಗೆ ಮಾಡುತ್ತಿದ್ದಾರೆ. ಮಹಾರಾಷ್ಟ್ರದಿಂದ ಬಂದಿರುವ ನಾವು ಮಾರ್ಗ ಮಧ್ಯ ಪೊಲೀಸರಿಗೆ ಎರಡೆರಡು ಸಾವಿರ ಹಣ ನೀಡುತ್ತಾ ಹೋದರೇ ಹೇಗೆ ಎಂದು ವಾಹನ ಚಾಲಕ ಪ್ರಶ್ನಿಸಿದ್ದಾನೆ.ಅಲ್ಲದೇ ನನ್ನ ಬಳಿ ಹಣ ಪಡೆದುಕೊಂಡು ನನಗೆ ಹೊಡೆಯುತ್ತಿದ್ದಾರೆ ಎಂದು ವಿಡಿಯೋದಲ್ಲಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಅಲ್ಲದೇ ನಾವು ಕಳ್ಳರಲ್ಲ ನಮ್ಮ ದಾಖಲೆಗಳು ಸರಿಯಾಗಿಲ್ಲವಾದರೇ ದಂಡ ಕಟ್ಟಿ ಅದನ್ನು ಬಿಟ್ಟು ಹೀಗೆ ಸುಲಿಗೆ ಮಾಡುವುದಲ್ಲದೇ ನಮ್ಮ ಮೇಲೆ ಹಲ್ಲೆ ಮಾಡಿರುವುದು ಖಂಡನೀಯವಾಗಿದೆ ಎಂದು ವಾಹನ ಚಾಲಕ ಆಕ್ರೋಶ ವ್ಯಕ್ತಪಡಿಸಿದ್ದಾನೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





