Breaking News

ಬಿಎಸ್ ವೈಗೆ ಸರ್ಕಾರ ನಡೆಸುವುದು ತುಂಬಾ ಕಷ್ಟ: ಹೊರಟ್ಟಿ

ಹುಬ್ಬಳ್ಳಿ:ಯಡಿಯೂರಪ್ಪ ಅವರಿಗೆ ದೇವರ ಒಳ್ಳೆಯದು ಮಾಡಲಿ. ಆದರೆ ಬಿ ಎಸ್ ವೈ ಸರ್ಕಾರ ನಡೆಸುವುದು ತುಂಬಾ ಕಷ್ಟ ಎಂದು ಮಾಜಿ ಸಭಾಪತಿ ಹಾಗೂ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ತಿಳಿಸಿದರು.ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು,ಬಿ ಎಸ್ ವೈ ಇಂದು ಪ್ರಮಾಣ ವಚನ ಸ್ವೀಕಾರ ಮಾಡುತಿದ್ದಾರೆ.ಅವರಿಗೆ ದೇವರ ಒಳ್ಳೆಯದು ಮಾಡಲಿ ಎಂದರು.‌ಕುಮಾರಸ್ವಾಮಿ ಅವರಿಗೆ ತಾಳ್ಮೆ ಇತ್ತು .ಆದರೆ ಆ ತಾಳ್ಮೆ ಬಿ ಎಸ್ ವೈ ಗೆ ಇಲ್ಲಾ ಎಂದು ಅವರು ಹೇಳಿದರು. ಬಿಜೆಪಿ ಅಧಿಕಾರಕ್ಕೆ ಬಂದರು ಬಹಳ ದಿನ ಸರ್ಕಾರ ನಡೆಯೋದಿಲ್ಲ.‌ ಸರ್ಕಾರ ಮಾಡೋದು ಅಷ್ಟೊಂದು ಸುಲಭದ ಕೆಲಸವಲ್ಲ ಎಂದು ಅವರು ಹೇಳಿದರು.ಅತೃಪ್ತರನ್ನು ಸಚಿವರನ್ನಾಗಿ ನೀಡೋ ಭರವಸೆ ಬಿಜೆಪಿಯವರ ನೀಡಿದ್ದಾರೆ. ಅತೃಪ್ತರನ್ನು ನಿಭಾಯಿಸುವುದು ಬಿಜೆಪಿಗೆ ಬಹಳ‌ ಕಷ್ಟ ಎಂದರು.ಸ್ಪೀಕರ್ ಬಹಳ ವಿಚಾರಮಾಡಿ ‌ನಿರ್ಧಾರ ಕೈಗೊಂಡಿದ್ದಾರೆ. ಶಾಸಕರು ಅನರ್ಹ ಮಾಡಿದ್ದು, ಸರಿಯಾದ ಕ್ರಮವಾಗಿದೆ ಎಂದರು.ರಾಜ್ಯದಲ್ಲಿ ಸ್ಥಿರವಾದ ಸರ್ಕಾರ ಕೊಡಲು ಸಾಧ್ಯವಿಲ್ಲ.ಕೇಂದ್ರದ ಮೋದಿ ಸರ್ಕಾರ ಪರಿಶೀಲನೆ ನಡೆಸಬೇಕಾಗಿತ್ತು. ಬಿ ಎಸ್ ವೈ ಸರ್ಕಾರಕ್ಕೆ ತುಂಭಾ ಆಯುಷ್ಯ ಇಲ್ಲಾ ಎಂದು ಭವಿಷ್ಯ ನುಡಿದರು.ಇಂದು ಕಾಂಗ್ರೆಸ್ ಬಿಟ್ಟವರು ನಾಳೆ ಬಿ ಜೆ ಪಿ ಬಡಲ್ಲಾ ಎಂದು ಹೇಳಲು ಸಾದ್ಯವಿಲ್ಲ.ಮೈತ್ರಿ ಸರ್ಕಾರದಲ್ಲಿ ಬಹಳ ಜನ ಟ್ರಬಲ್ ಶೂಟರ್ ಇದ್ದರು , ಆದರೆ ಬಿ ಜೆ ಪಿ ಯಲ್ಲಿ ಟ್ರಬಲ್ ಕ್ರಿಯೇಟರ್ ಇದ್ದಾರೆ ಎಂದು ಲೇವಡಿ ಮಾಡಿದರು.ಈ ಸರ್ಕಾರ ಬಹಳ ದಿನ ಇರಲಾರದು ಎಂದು ಮಾತಿನ ಚಾಟಿ ಬೀಸಿದರು.

Share News

About admin

Check Also

ಇಟ್ಟಂಗಿ ತುಂಬಿದ ಟೆಂಪೋ, ಬೈಕ್ ಡಿಕ್ಕಿ ಸವಾರ ಸಾವು.!!

ಇಟ್ಟಿಗೆ ತುಂಬಿದ ಟೆಂಪೋ ಬೈಕ್ ಮಧ್ಯೆ ಅಪಘಾತ ಸಂಭವಿಸಿದ್ದು ಬೈಕ್ ಸವಾರ ಮೃತಪಟ್ಟ ಘಟನೆ ತಾಲೂಕಿನ ಮನಸೂರ ಕ್ರಾಸ್ ಬಳಿ …

Leave a Reply

Your email address will not be published. Required fields are marked *