ಹುಬ್ಬಳ್ಳಿ: ದೇಶವೇ ಹೆಮ್ಮೆ ಪಡುವ ಕಾರ್ಗಿಲ್ ವಿಜಯೋತ್ಸವವನ್ನು ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಯೋಧರಿಗೆ ವಿಶೇಷ ಗೌರವ ಸಲ್ಲಿಸುವ ಸದುದ್ದೇಶದಿಂದ ಗಜಾನನ ಮಂಡಳ ಮತ್ತು ಕನ್ನಡ ಪರ ಮಹಾಮಂಡಳ ನೇತೃತ್ವದಲ್ಲಿ ಬೃಹತ ಮೆರವಣಿಗೆ ಹಮ್ಮಿಕೊಳ್ಳಲಾಯಿತು.ನಗರದ ಅಂಬೇಡ್ಕರ್ ವೃತ್ತದಿಂದ ಕಿತ್ತೂರ ರಾಣಿ ಚೆನ್ನಮ್ಮ ವೃತ್ತದವರಗೆ ಮೆರವಣಿಗೆ ಜರುಗಿತು.ಮೆರವಣಿಗೆಯಲ್ಲಿ ನಗರದ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸುವ ಮೂಲಕ ದೇಶಾಭಿಮಾನ ಮೆರೆದರು. ಮೆರವಣಿಗೆಯಲ್ಲಿ ಯೋಧರಿಗೆ ಹಾಗೂ ದೇಶಾಭಿಮಾನದ ಘೋಷಣೆಗಳು ಮೊಳಗಿದವು.ದೇಶ ರಕ್ಷಣೆಗೆ ತಮ್ಮ ಜೀವನವನ್ನು ತ್ಯಾಗ ಮಾಡಿದ ಕಾರ್ಗಿಲ್ ಹುತಾತ್ಮ ಯೋಧರಿಗೆ ಹಾಗೂ ಸರ್ಜಿಕಲ್ ಸ್ಟ್ರೈಕನಲ್ಲಿ ಹುತಾತ್ಮರಾದವರಿಗೆ ವಿಶೇಷ ನಮನ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಯುವ ಸಮುದಾಯಕ್ಕೆ ದೇಶ ಹಾಗೂ ಯೋಧರ ಕುರಿತು ಜಾಗೃತಿ ಮೂಡಿಸಿರುವುದು ವಿಶೇಷವಾಗಿತ್ತು.
bigtvnews | Hubli Dharwad News | Kannada News | Karnataka News Hubli News | News In Hubli | Local news





