Breaking News

ಐಎಂಎ ವಂಚಕ ಮನ್ಸೂರ್ ಆಲಿಖಾನ್ ಆಸ್ತಿ ಜಪ್ತಿ ಮಾಡಿದ ಕೋಲಾರ ಜಿಲ್ಲಾಡಳಿತ

ಕೋಲಾರ : ಕೋಲಾರದಲ್ಲಿ ಐಎಂಎ ವಂಚಕ ಮನ್ಸೂರ್ ಆಲಿಖಾನ್ ಗೆ ಸೇರಿದ ಆಸ್ತಿಯನ್ನು ಜಿಲ್ಲಾಡಳಿತ ವಶಕ್ಕೆ ಪಡೆದಿದೆ. ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ಆದೇಶದ ಹಿನ್ನಲೆಯಲ್ಲಿ ಜಮೀನನ್ನು ಜಿಲ್ಲಾಡಳಿತ ವಶಪಡಿಸಿಕೊಂಡಿದೆ. ಸೋಮವಾರ ಸಂಜೆ ಡಿಸಿ ಮಂಜುನಾಥ್, ಎಸಿ ಸೋಮಶೇಖರಯ್ಯ ನೇತೃತ್ವದಲ್ಲಿ ಮನ್ಸೂರ್ ಖಾನ್ ಗೆ ಸೇರಿದ ಆಸ್ತಿಯನ್ನು ವಶಕ್ಕೆ ಪಡೆದು, ಅತಿಕ್ರಮಣ ನಿಷೇಧಿಸಿದೆ ಎಂದು ಬೋರ್ಡ್ ಹಾಕಿದ್ದಾರೆ. ಕೋಲಾರ‌ದ ಮಾಲೂರು ತಾಲೂಕಿನ ಟೇಕಲ್ ರಸ್ತೆಯಲ್ಲಿರೋ ಪುರ ಮತ್ತು ಬೈರತನಹಳ್ಳಿ ಗ್ರಾಮದ ಬಳಿ ಇರುವ ಐಎಂಐ ಸಂಸ್ಥೆಗೆ ಸೇರಿದ ಜಮೀನುಗಳನ್ನ ವಶಪಡಿಸಿಕೊಳ್ಳಾಗಿದೆ. ಪುರ ಗ್ರಾಮದ ಸರ್ವೆ ನಂ.6 /2A1 ರಲ್ಲಿ 0.20 ಗುಂಟೆ ಮತ್ತು ಸರ್ವೆ‌ ನಂ.5 ರ 30 ಗುಂಟೆ ಜಮೀನು ವಶಪಡಿಸಿಕೊಳ್ಳಲಾಗಿದೆ. ಬೈರತನಹಳ್ಳಿಯಲ್ಲಿರುವ ಮನ್ಸೂರ್ ಖಾನ್ ಫಾರಂ ಹೌಸ್ ನ್ನು ಜಿಲ್ಲಾಡಳಿತ ವಶಕ್ಕೆ ಪಡೆದಿದೆ. ಈ ಸಂದರ್ಭದಲ್ಲಿ ಸ್ಥಳೀಯರ ಮಹಜರನೊಂದಿಗೆ ಆಸ್ತಿಯನ್ನ ವಶಪಡಿಸಿಕೊಂಡಿದ್ದಾರೆ.ಈ ಸಂದರ್ಭದಲ್ಲಿ ತಹಸೀಲ್ದಾರ್, ಸ್ಥಳೀಯ ಕಂದಾಯ ಅಧಿಕಾರಿಗಳು ಹಾಜರಿದ್ದರು.

Share News

About admin

Check Also

ಒಂದು ಬೆಕ್ಕಿನ ಗರ್ಭ… ಎರಡು ಮನೆಗಳ ಗಲಾಟೆ! ಕೊನೆಗೆ ಪೊಲೀಸರೇ ‘ವಿಚಿತ್ರ ತೀರ್ಪು’ ಕೊಟ್ಟ ಕಥೆ!

ನಾಲ್ಕು ಮರಿಗಳು ಹುಟ್ಟಿದವು… ಆದರೆ ಕಸ್ಟಡಿ ಯಾರಿಗೆ..? ಪೊಲೀಸರನ್ನೇ ಕಂಗೆಡಿಸಿದ ಪ್ರಕರಣ! ಬೆಕ್ಕು ಗರ್ಭಿಣಿ… ನೆರೆಹೊರೆಯವರ ಗಲಾಟೆ! ಬೆಂಗಳೂರಿನಲ್ಲಿ ‘ವಿಚಿತ್ರ’ …

Leave a Reply

Your email address will not be published. Required fields are marked *