ಮಂಡ್ಯ: ಜಿಲ್ಲೆ ಮಂಡ್ಯ ಅಕ್ಕಿಹೆಬ್ಬಾಳು ಹೋಬಳಿಯಆಲೇನಹಳ್ಳಿ ಗ್ರಾಮದಲ್ಲಿ ಸಾಲದ ಬಾಧೆಯನ್ನು ತಾಳಲಾರದೆ ರೈತನೊಬ್ಬ ತನ್ನ ಜಮೀನಿನಲ್ಲಿ ವಿಷ ಕುಡಿದು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಗ್ರಾಮದ ಪ್ರಗತಿಪರ ರೈತರಾದ ರಾಜೇಗೌಡ(60) ಅವರೇ ಮೃತ ದುರ್ದೈವಿಯಾಗಿದ್ದಾರೆ.
ಕಾವೇರಿ ಗ್ರಾಮೀಣ ಬ್ಯಾಂಕ್ ನಲ್ಲಿ 3ಲಕ್ಷರೂ ಕೃಷಿ ಸಾಲ ಹಾಗೂ 2ಲಕ್ಷರೂ ಕೈಸಾಲ ಮಾಡಿ ಬೇಸಾಯ ಮಾಡಿದ್ದರು. ಬೋರ್ ವೆಲ್ ನಲ್ಲಿ ನೀರು ಬತ್ತಿಹೋಗಿ ಬೆಳೆಗಳು ಒಣಗಿದ ಹಿನ್ನೆಲೆಯಲ್ಲಿ ಮನನೊಂದ ರಾಜೇಗೌಡ ನಿನ್ನೆ ಸಂಜೆ ತನ್ನ ಜಮೀನಿನಲ್ಲಿ ವಿಷ ಕುಡಿದು ಆತ್ಮಹತ್ಯೆಗೆ ಪ್ರಯತ್ನಿಸಿದರು.
ಅಕ್ಕಪಕ್ಕದ ಜಮೀನಿನವರು ಕೂಡಲೇ ರಾಜೇಗೌಡರನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಸಾಗಿಸುವ ಮಾರ್ಗದ ಮಧ್ಯದಲ್ಲಿಯೇ ಕೊನೆಯುಸಿರೆಳೆದರು. ಘಟನೆಯ ಬಗ್ಗೆ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣವು ದಾಖಲಾಗಿದೆ.
ಜೀವನಾಧಾರವಾಗಿದ್ದ ರಾಜೇಗೌಡರನ್ನು ಕಳೆದುಕೊಂಡು ಮೃತರ ಕುಟುಂಬವು ಅನಾಥವಾಗಿದೆ. ರಾಜ್ಯ ಸರ್ಕಾರವು ಮೃತ ರೈತ ರಾಜೇಗೌಡರ ಕುಟುಂಬಕ್ಕೆ ಸೂಕ್ತ ಪರಿಹಾರವನ್ನು ಕೊಡಿಸಿಕೊಟ್ಟು ಸಹಾಯ ಮಾಡಬೇಕೆಂದು ಗ್ರಾಮದ ಮುಖಂಡ ಎಪಿಎಂಸಿ ಮಾಜಿಅಧ್ಯಕ್ಷ ಆಲೇನಹಳ್ಳಿ ಮಹೇಶ್ ಮನವಿ ಮಾಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





