ಚಿತ್ರದುರ್ಗ: ರಾಜ್ಯ ಬಿಜೆಪಿ ಸರ್ಕಾರದ ಸಂಪುಟ ರಚನೆ ಹಿನ್ನಲೆಯಲ್ಲಿ ಹೊಳಲ್ಕೆರೆ ಶಾಸಕ ಎಂ ಚಂದ್ರಪ್ಪ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದಾರೆಯೇ ಎಂಬ ಕುತೂಹಲ ಉಂಟಾಗಿದೆ. ಈ ಸಂಬಂಧವಾಗಿ ಎಂ.ಚಂದ್ರಪ್ಪ ಭಾವಿ ಸಚಿವರು ಎಂಬ ಪೋಸ್ಟ್ ಸಾಮಾಜಿಕ ಜಾಲಾತಾಣದಲ್ಲಿ ಹರಿದಾಡುತ್ತಿರುವದು ಕುತೂಹಲಕ್ಕೆ ಕಾರಣವಾಗಿದೆ.ರಾಜಕೀಯ ವಲಯದಲ್ಲಿ ಸಿಎಂ ಯಡಯೂರಪ್ಪರ ಕಟ್ಟಾಳು ಎನಿಸಿಕೊಂಡಿರುವ ಎಂ ಚಂದ್ರಪ್ಪ ಅವರು ಈ ಹಿಂದೆ ಬಿಎಸ್ ವೈ ಬಿಜೆಪಿ ಬಿಟ್ಟು ಕೆಜೆಪಿ ಪಕ್ಷ ಕಟ್ಟಿದಾಗ ಎಂ. ಚಂದ್ರಪ್ಪ ಶಾಸಕ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ಕೆಜೆಪಿ ಸೇರಿದ್ದರು. ಹೀಗಾಗಿಯೇ ಚಂದ್ರಪ್ಪನವರಿಗೆ ಸಚಿವ ಸ್ಥಾನ ದೊರೆಯಬಹುದೆಂಬ ಮಾತುಗಳು ಕೇಳಿಬರುತ್ತಿವೆ. ಜೊತೆಗೆ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳಿಂದ ಸಾಮಾಜಿಕ ಜಾಲತಾಣದಲ್ಲಿ ರಘುಚಂದನ್ ಅಭಿಮಾನಿಗಳು ಎಂಬ ಫೇಸ್ಬುಕ್ ಗ್ರೂಫ್ ನಿಂದಶಾಸಕ ಎಂ.ಚಂದ್ರಪ್ಪರ ಫೋಟೋ ಹಾಕಿ ಬಿಎಸ್ವೈ ಗೆ ಅಭಿನಂದನೆ ತಿಳಿಸಲಾಗಿದೆ. ಅಷ್ಟೇ ಅಲ್ಲದೇನೀವೆಲ್ಲೋ ನಾನಲ್ಲೆ ಎಂಬ ವಾಕ್ಯ ಬಳಸಿ ಪೋಸ್ಟ್ ಮಾಡಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





