ಹುಬ್ಬಳ್ಳಿ: ಹು-ಧಾ ಅರ್ಥೋಪೆಡಿಕ್ ವತಿಯಿಂದ ಆರೋಗ್ಯಕರ ಜೀವನಕ್ಕೆ ಎಲುಬಿನ ಕೊಡುಗೆ ಎಂಬ ಘೋಷ ವಾಕ್ಯದೊಂದಿಗೆ ರಾಷ್ಟ್ರೀಯ ಎಲಬುಕೀಲು ದಿನಾಚರಣೆಯ ಸಪ್ತಾಹವನ್ನು ಆ.1 ರಿಂದ ಹಮ್ಮಿಕೊಳ್ಳಲಾಗಿದೆ ಎಂದು ಆರ್ಥೋಪೆಡಿಕ್ ಅಸೋಸಿಯೇಷನ್ ಅಧ್ಯಕ್ಷ ಗುರುರಾಜ ಮುರುಗೋಡ ಹೇಳಿದರು.ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಧುನಿಕ ದಿನಗಳಲ್ಲಿ ಜನರು ಹಲವಾರು ಒತ್ತಡಗಳಿಂದ ಪೌಷ್ಟಿಕ ಆಹಾರದ ಕಡೆ ಗಮಗ ಕೊಡದೇ ಇರುವ ಕಾರಣ ಆರೋಗ್ಯ ಹಾಗೂ ಎಲುಬಿನ ಸಾಂದ್ರತೆಯನ್ನು ಹಾಳು ಮಾಡಿಕೊಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಎಲಬುಕೀಲು ದಿನಾಚರಣೆ ಮೂಲಕ ಒಂದು ವಾರದ ಸಪ್ತಾಹವನ್ನು ಆಗಸ್ಟ್ 1 ರಿಂದ 7 ರವರೆಗೆ ಹಮ್ಮಿಕೊಳ್ಳಲಾಗಿದೆ. ಈ ವರ್ಷದ ಘೋಷಣೆಯನ್ನು ಆರೋಗ್ಯಕರ ಜೀವನದಲ್ಲಿಎಲುಬಿನ ಕೊಡುಗೆ ವಿಷಯವನ್ನು ಆಯ್ಕೆಮಾಡಿಕೊಳ್ಳಲಾಗಿದೆ, ಈ ವಿಷಯದ ಕುರಿತುಸಪ್ತಾಹದ 7 ದಿನಗಳಲ್ಲಿ ವಿವಿಧೆಡೆ ಸಾರ್ವಜನಿಕರಿಗೆಆರೋಗ್ಯ ಮತ್ತು ಎಲುಬಿನ ಬಗ್ಗೆ ತಿಳುವಳಿಕೆನೀಡಲಾಗುವುದು ಎಂದರು.ಪತ್ರಿಕಾಗೋಷ್ಠಿಯಲ್ಲಿಡಾ.ಸಂದೀಪ, ಡಾ.ವಿವೇಕ ಪಾಟೀಲ್ , ಡಾ.ಸಚಿನ್ರೇವಣಕರ್ ಇದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





