ಹುಬ್ಬಳ್ಳಿ: ದುಡಿಯುವ ಮನಸ್ಸುಳ್ಳ ಕನ್ನಡಿಗರಿಗೆ ಕರ್ನಾಟಕದಲ್ಲಿಯೇ ಉದ್ಯೋಗ ಸೃಷ್ಟಿಯಾಗಬೇಕು ಎಂದು ಆಗ್ರಹಿಸಿ ಇದೇ 06 ರಂದು ನಗರದ ವಿವಿಧ ಬ್ಯಾಂಕ್ ಗಳಿಗೆ ಸಂಘಟನೆಯ ಪ್ರತಿಪಾದನೆಯ ಪತ್ರ ವಿತರಣೆ ಮಾಡಲಾಗುವುದು ನಾವು ಕನ್ನಡಿಗರು ಸಂಘಟನೆಯ ಅಧ್ಯಕ್ಷರಾದ ಗಣೇಶ ಭಟ್ ಆಗ್ರಹಿಸಿದರು.ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿರುವ ಹಲವಾರು ವಿಭಾಗದಲ್ಲಿ ಬೇರೆ ರಾಜ್ಯದವರೇ ಒಳನುಗ್ಗಿ ಕನ್ನಡಿಗರ ಅವಕಾಶಗಳನ್ನು ಕಸಿದುಕೊಳ್ಳುತ್ತಿದ್ದಾರೆ.ಅಲ್ಲದೇ ಪರಭಾಷಿಕರು ಆವರಿಸಿರುವ ಕರ್ನಾಟಕ ರಾಜ್ಯ ಕನ್ನಡಿಗರು ನಾಮ ಮಾತ್ರ ಜೀವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.ಕರ್ನಾಟಕದ ಎಲ್ಲಾ ಉದ್ಯೋಗಾವಕಾಶಗಳು ಅಂದರೇ ನೌಕರಿಗಳು, ವ್ಯಾಪಾರ ವಹಿವಾಟು, ಉದ್ದಿಮೆ ರಂಗ, ಬ್ಯಾಂಕ್ ಹಾಗೂ ಕೃಷಿ ಇತರೆ ಸೇವಾ ಕ್ಷೇತ್ರದಲ್ಲಿ ಕನ್ನಡಿಗರಿಗೆ ಮೀಸಲಿಡಬೇಕು ಎಂದು ಅವರು ಆಗ್ರಹಿಸಿದರು. ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಬ್ಯಾಂಕಗಳಲ್ಲಿ(ಸರ್ಕಾರಿ, ಖಾಸಗಿ,ಗ್ರಾಮೀಣ) ಕನ್ನಡಿಗರನ್ನು ನೇಮಕಾತಿ ಮಾಡಬೇಕು ಎಂಬುವಂತೆ ಕನ್ನಡಪರ ಸಂಘಟನೆಗಳು ಪ್ರಾರಂಭಿಸಿದ್ದು, ನಾವು ಕನ್ನಡಿಗರು ಸಂಘಟನೆಯಿಂದ ಈ ಹೋರಾಟಕ್ಕೆ ಕೈ ಜೋಡಿಸಿದ್ದೇವೆ ಎಂದು ಅವರು ಹೇಳಿದರು. ಗ್ರಾಮೀಣ ಬ್ಯಾಂಕುಗಳು ನೇಮಕಾತಿಯ ಪರೀಕ್ಷೆಯಲ್ಲಿ ಕನ್ನಡ ಬಾಷೆ ಬರೆಯುವ ಅವಕಾಶ ನೀಡಿದಾಕ್ಷಣ ಕನ್ನಡಿಗರಿಗೆ ಉದ್ಯೋಗ ಅವಕಾಶ ನೀಡಿದಂತಾಗುವುದಿಲ್ಲ ಎಂದರು. ಕರ್ನಾಟಕದಲ್ಲಿ ನಿರುದ್ಯೋಗಿಗಳು ಹಾಗೂ ಸಾರ್ವಜನಿಕರು ಅನುಭವಿಸುತ್ತಿರುವ ಸಂಕಷ್ಟವನ್ನು ದೂರ ಮಾಡುವ ಸದುದ್ದೇಶದಿಂದಆ.06ರಂದು ಹುಬ್ಬಳ್ಳಿಯಲ್ಲಿರುವ ಸರ್ಕಾರಿ, ಖಾಸಗಿ ಬ್ಯಾಂಕುಗಳಿಗೆ ಬೇಟಿ ನೀಡಿ ಸಂಘಟನೆಯ ನಿಲುವಿನ ಪ್ರತಿಪಾದಿನೆಯ ಪತ್ರ ವಿತರಿಸಿ ಮನವರಿಕೆ ಮಾಡಲಾಗುವುದು ಎಂದು ಅವರು ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಮಹೇಶ ಗುರನಹಳ್ಳಿ, ರುದ್ರಪ್ಪ ಗುಣಕಲ್, ಬಸವರಾಜ ಬಿಡ್ನಾಳ ಸೇರಿದಂತೆ ಇತರರು ಇದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





