ಬೆಳಗಾವಿ: ಬೆಳಗಾವಿಯ ಉತ್ತರದಲ್ಲಿ ಸ್ಮಾರ್ಟಸಿಟಿ ಕಾಮಗಾರಿಗೆ ಕೇಂದ್ರ ಸಚಿವ ಸುರೇಶ ಅಂಗಡಿಯವರಿಂದ ಚಾಲನೆಯನ್ನ ನೀಡಲಾಯಿತು.ಬೆಳಗಾವಿ ಉತ್ತರದಲ್ಲಿ ಮಾಡಲಾಗುತ್ತಿರುವ ಸ್ಮಾರ್ಟ್ಸಿಟಿ ಕಾಮಗಾರಿಗೆ ಚಾಲನೆಯನ್ನ ನೀಡಲಾಯಿತು. ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಟ್ರಾಮಾ ಸೆಂಟರ್‌ಗೆ ಹೈಟೆಕ್ ಅಂಬ್ಯುಲೆನ್ಸ್ನ್ನವಿತರಿಸಲಾಯಿತು. ಇದರಲ್ಲಿ ಲೈಫ್ ಸೇವಿಂಗ್ ಇಕ್ವಿ ಪಮೆಂಟ್ಸ್, ಡೆಫಿಬ್ರಿಲೇಟರ್, ಮಲ್ಟಿ ಪ್ಯಾರಾ ಮಾನಿಟರ್, ಐಸಿಯು ವೆಂಟಿಲೇಟರ್ಸ್, ಫ್ಲಾö್ಯಟ್ ಪ್ಯಾನಲ್ ಡಿಟೆಕ್ರ‍್ಸ್ಗಳ ಸೌಲಭ್ಯವಿದೆ. ಈ ಕುರಿತು ಕೇಂದ್ರ ಸಚಿವ ಸುರೇಶ ಅಂಗಡಿಯವರು ಮಾತನಾಡಿ ಬೀಮ್ಸ್ ಅಭಿವೃದ್ಧಿಯನ್ನ ಮಾಡಲಾಗುತ್ತಿದೆ. ಅಧಿಕಾರಿಗಳು ಅದರ ಸದುಪಯೋಗ ಪಡಿದುಕೊಂಡು ಒಳ್ಳೆಯ ಸೇವೆ ನೀಡಲು ಅಣಿಯಾಗಬೇಕೆಂದರು.ಶಾಸಕ ಅನೀಲ ಬೆನಕೆ ಅವರು ಮಾತನಾಡಿ ಕೇಂದ್ರ ಸಚಿವ ಸುರೇಶ ಅಂಗಡಿಯವರು ಬೆಳಗಾವಿಯನ್ನ ಸ್ಮಾರ್ಟ್ಸಿಟಿ ಸೂಚಿಗೆ ಸೇರಿಸಲು ಪಟ್ಟ ಶ್ರಮವನ್ನ ಶ್ಲಾಘಿಸಿದರು. ೪೭ ಕೋಟಿ ಅಡಿ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಕೆಎಲ್‌ಇಯಿಂದ ಕೊಲ್ಹಾಪುರ ಸರ್ಕಲ್, ಕೊಲ್ಹಾಪುರ ಸರ್ಕಲ್‌ನಿಂದ ಚೆನ್ನಮ್ಮ ವೃತ್ತ, ಕೊಲ್ಹಾಪುರ ಸರ್ಕಲ್‌ನಿಂದ ಸಂಗೋಳ್ಳಿ ರಾಯಣ್ಣ ರಸ್ತೆ ಅಭಿವೃದ್ಧಿಯ ೩೧.೨೯ ಕೋಟಿ ರೂಪಾಯಿಯ ೧೨ ತಿಂಗಳ ಗುತ್ತಿಗೆಯನ್ನ ಶಹಾಪೂರದ ಕೆಕೆಬಿ ಇಂಜಿನಿಯರ್ಸ್ಗಳಿಗೆ ನೀಡಲಾಗಿದೆ.ಎಪಿಎಂಸಿ ಜಂಕ್ಷನ್‌ನಿಂದ ಅಜಂನಗರದ ವೈ ಜಂಕ್ಷನ್ ಮತ್ತು ಆಜಂನಗರದಿಂದ ಇನ್‌ಮಾರ್ಕ್ ಶೋರೂಂ ವರೆಗೆ ರಸ್ತೆ ನಿರ್ಮಾಣಕ್ಕೆ ೬.೦೮ ಕೋಟಿಯ ಗುತ್ತಿಗೆಯನ್ನ ೧೨ ತಿಂಗಳ ಮಟ್ಟಿಗೆ ಹುಬ್ಬಳ್ಳಿಯ ಗುತ್ತಿಗೆದಾರ ಪ್ರದೀಪ ಕಂಸ್ಟಕ್ಷನ್‌ಗೆ ನೀಡಲಾಗಿದೆ. ಹಿಂದಿನ ಕೆಲಸ ಬೇಗನೆ ಮುಗಿಸಬೇಕು. ಗುತ್ತಿಗೆದಾರರು ನಿರ್ಧಾರಿತ ಸಮಯದಲ್ಲಿ ಕಾಮಗಾರಿ ಮುಗಿಸಿ, ಸುಂದರ ಸ್ಮಾರ್ಟ್ಸಿಟಿಯ ನಿರ್ಮಾಣ ಮಾಡಬೇಕೆಂದು ಕರೆ ನೀಡಿದರು.ಇನ್ನು ಶಾಸಕ ಅಭಯ ಪಾಟೀಲ ಮಾತನಾಡಿ ಕೇಂದ್ರ ಸಚಿವ ಸುರೇಶ ಅಂಗಡಿಯವರ ಪ್ರಯತ್ನದಿಂದ ಬೆಳಗಾವಿಯಲ್ಲಿ ಅನೇಕ ಕಾಮಗಾರಿಗಳನ್ನ ಪ್ರಾರಂಭಿಸಲಾಗಿದೆ. ಎಎಸ್‌ಐ ಹಾಸ್ಪಿಟಲ್‌ನ್ನ ದಕ್ಷಿಣದಲ್ಲಿ ಆರಂಭಿಸಬೇಕೆಂದು ಕೇಂದ್ರ ಸಚಿವ ಅಂಗಡಿಯವರಿಗೆ ಒತ್ತಾಯಿಸಲಾಗಿತ್ತು. ಅದರಂತೆ ಹಾಸ್ಟಿಟಲ್ ಆರಂಭಿಸುವ ಭರವಸೆ ನೀಡಿದಕ್ಕೆ ಸಚಿವ ಅಂಗಡಿಯವರ ಕಾರ್ಯವನ್ನ ಶ್ಲಾಘಿಸಿದರು.ಈ ವೇಳೆ ಬೀಮ್ಸ್ ಸಂಚಾಲಕ ಕಳಸದ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ಧರು.
bigtvnews | Hubli Dharwad News | Kannada News | Karnataka News Hubli News | News In Hubli | Local news





