ಮಂಡ್ಯ: ಪುರಸಭೆ ವ್ಯಾಪ್ತಿಯ 8ನೇ ವಾರ್ಡಿನಲ್ಲಿ ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯ ಅಡಿಯಲ್ಲಿ 83ಲಕ್ಷರೂಗಳ ವೆಚ್ಚದಲ್ಲಿ ರಸ್ತೆಗಳು ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಮಾಜಿಶಾಸಕ ಕೆ.ಬಿ.ಚಂದ್ರಶೇಖರ್ ಮತ್ತು ವಾರ್ಡಿನ ಸದಸ್ಯ ಕೆ.ಸಿ.ಮಂಜುನಾಥ ಭೂಮಿ ಪೂಜೆ ಮಾಡಿದರು.ಮಂಡ್ಯ ಜಿಲ್ಲೆಯ .ಕೃಷ್ಣರಾಜಪೇಟೆ ಪಟ್ಟಣದ ಅಭಿವೃದ್ಧಿಗೆ ಸದಸ್ಯರು ಪಕ್ಷಾತೀತವಾಗಿ ಸಹಕರಿಸಬೇಕು.ಪಟ್ಟಣದ ಅಭಿವೃದ್ಧಿಗೆ ಒಂದಾಗಿ ಕೆಲಸ ಮಾಡಬೇಕು ಎಂದು ಮಾಜಿಶಾಸಕ ಕೆ.ಬಿ.ಚಂದ್ರಶೇಖರ್ ಮನವಿ ಮಾಡಿದರು… ಈ ಸಂದರ್ಭದಲ್ಲಿ ಮನ್ ಮುಲ್ ನಿರ್ದೇಶಕ ಎಸ್.ಅಂಬರೀಶ್, ಮಾಜಿಅಧ್ಯಕ್ಷ ಎಂ.ಬಿ.ಹರೀಶ್, ಪುರಸಭೆಯ ಮಾಜಿಅಧ್ಯಕ್ಷ ಕೆ.ಬಿ.ಮಹೇಶ್, ಕೆ.ಟಿ.ಚಕ್ರಪಾಣಿ, ಮುಖ್ಯಾಧಿಕಾರಿ ಸತೀಶ್ ಕುಮಾರ್, ಸದಸ್ಯರಾದ ಡಿ.ಪ್ರೇಮಕುಮಾರ್, ಖಮ್ಮರ್ ಬೇಗಂಸಲ್ಲೂ, ಪೌರಕಾರ್ಮಿಕರ ಸಂಘದ ಅಧ್ಯಕ್ಷ ಮಂಟೇಮಂಜು, ತಾಲ್ಲೂಕು ಪಂಚಾಯತ ಮಾಜಿಅಧ್ಯಕ್ಷ ಜಯರಂಗ ಮತ್ತಿತರರು ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





