ಹುಬ್ಬಳ್ಳಿ-ಧಾರವಾಡದಲ್ಲಿ ಗಾಂಜಾ ಮಾರಾಟ ಜಾಲ ಇವತ್ತು ನಿನ್ನೆಯದಲ್ಲ, ಮೊದಲಿನಿಂದಲೂ ಅವ್ಯಾಹತವಾಗಿ ಬೇರು ಬಿಟ್ಟಿದೆ. ಇದನ್ನ ತಡೆಯೋದಕ್ಕೆ ಈ ಮೊದಲು ಪೊಲೀಸರು ಸಾಕಷ್ಟು ಪ್ರಯತ್ನ ನಡೆಸಿದ್ರೂ ಅದು ಸಾಧ್ಯವಾಗಿರಲಿಲ್ಲ. ಆದ್ರೇ, ಈಗಿರೋ ಕಮೀಷನರ್ ಅದಕ್ಕೊಂದು ಪ್ಲಾನ್ ಮಾಡಿದ್ರು. ಅದರಿಂದಾಗಿ ಈಗ ಡ್ರಗ್ಸ್ ಮಾಫಿಯಾಗೆ ಕೊಕ್ಕೆ ಹಾಕ್ತಿದಾರೆ.
ಇವರೋ ಇವರ ಮುಖವೋ.. ಕಳ್ರಂಗಿದಾರೆ, ಅದ್ರೇ ಇವರು ಕಳ್ರಲ್ಲ, ಖದೀಮ್ರಲ್ಲ. ಗಾಂಜಾ ಮಾರಾಟ ಮಾಡೋ ಅಂತಾರಾಜ್ಯ ಡ್ರಗ್ಸ್ ಮಾಫಿಯಾ ಮಂದಿ. ನರೇಶ ಲೇಕು ಪಾಂಗಿ, ನಾಗೇಶ ರಿಂಗು ಕಿಲ್ಲೋ ಹಾಗೂ ಮತ್ಯಾರಾಜು ಈ ಮೂವರ ಹೆಸ್ರು ಕಣ್ರೀ. ಆಂಧ್ರದ ವಿಶಾಖಪಟ್ಟಣ ಇವರ ಊರಂತೆ. ಅಷ್ಟಿದ್ರೂ ಈ ಐನಾತಿಗಳು ಗಾಂಜಾವನ್ನ ರಾಜ್ಯದ ಕಾರವಾರ, ಗೋಕರ್ಣ, ಬಾಗಲಕೋಟ, ಹುಬ್ಬಳ್ಳಿ ಸೇರಿ ಬೇರೆ ಗಡಿಭಾಗದ ಜಿಲ್ಲೆಗಳಲ್ಲಿ ಮಾರಾಟ ಮಾಡ್ತಿದ್ರು. ಇವರ ಜಾಲ ಎಷ್ಟಿಯಂದ್ರೇ ಆಂಧ್ರ, ಒಡಿಶಾ ಸೇರಿ ಅಂತಾರಾಜ್ಯಗಳಿಗೂ ವಿಸ್ತರಿಸಿಕೊಂಡಿದೆ. ಅಷ್ಟೇ ಅಲ್ಲ, ಸ್ಥಳೀಯವಾಗಿ ಇವರೊಂದಿಗೆ ಸಾಕಷ್ಟು ಮಂದಿ ಸಂಪರ್ಕ ಹೊಂದಿದಾರೆ.
ಗಾಂಜಾ ಖರೀದಿ, ಅದನ್ನ ಮಾರಾಟ ಮಾಡೋದನ್ನ ಮಾಡ್ತಿದಾರೆ. ಆದ್ರೇ, ಇವತ್ತು ಹುಬ್ಬಳ್ಳಿಯ ಮಂಟೂರು ರಸ್ತೆಯ ಮ್ಯಾಂಗನೀಸ್ ಪ್ಲಾಟ್ ನ ಎಫ್ ಸಿ ಗೋಡೌನ್ ಬಳಿ ಇವರು ಗಾಂಜಾ ಮಾರಾಟ ಮಾಡೋಕೆ ಬರ್ತಿದಾರೆ ಅನ್ನೋ ಖಚಿತ ಮಾಹಿತ ಪೊಲೀಸರಿಗೆ ಸಿಕ್ಕಿತ್ತು. ಆಗಲೇ ನೋಡಿ, ಬೆಂಡಿಗೇರಿ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಮತ್ತವರ ತಂಡ ಎಚ್ಚೆತ್ತುಕೊಂಡಿತ್ತು. ಕಮೀಷನರ್, ಡಿಸಿಪಿ ಹಾಗೂ ಇಬ್ಬರ ಎಸಿಪಿ ನೇತೃತ್ವದ ತಂಡ ಇವರಿಗೆ ಹೇಗೆ ದಾಳಿ ಮಾಡ್ಬೇಕು ಅನ್ನೋ ಬಗ್ಗೆ ಮಾರ್ಗದರ್ಶನ ಮಾಡಿತ್ತು. ಅದನ್ನಾಧರಿಸಿಯೇ ಬೆಂಡಿಗೇರಿ ಪೊಲೀಸ್ ಇನ್ಸ್ ಪೆಕ್ಟರ್ ಸಂತೋಷಕುಮಾರ ನೇತೃತ್ವದ ತಂಡ ದಾಳಿ ನಡೆಸಿ 3 ಆರೋಪಿಗಳನ್ನ ಬಂಧಿಸಿದೆ.
ಎಂ.ಎನ್ ನಾಗರಾಜ, ಹು-ಧಾ ಪೊಲೀಸ್ ಕಮೀಷನರ್
ಮೊದಲಿನಿಂದಲೂ ಗಾಂಜಾ ಮಾಫಿಯಾ ಬಗ್ಗೆ ಸಾಕಷ್ಟು ಶ್ರಮವಹಿಸಿದ್ರೂ ಪೊಲೀಸರಿಗೆ ಪ್ರಕರಣಗಳನ್ನ ಬೇಧಿಸೋಕಾಗಿರಲಿಲ್ಲ. ಆದ್ರೇ, ಈಗಿರೋ ಪೊಲೀಸ್ ಕಮೀಷನರ್ ಎಂ.ಎನ್ ನಾಗರಾಜ ಅದಕ್ಕಾಗಿ ಒಂದು ಮಾಸ್ಟರ್ ಪ್ಲಾನ್ ಮಾಡಿದ್ರು. ಪೊಲೀಸ್ ಬೀಟ್ ಸಿಸ್ಟಮ್ ಜತೆಗೆ ಪ್ರತಿ ಬೀಟ್ ಗೆ ತಲಾ 10 ಮಂದಿಯಂತೆ ಅವಳಿನಗರದಲ್ಲಿ 700 ಮಂದಿ ಮಾಹಿತಿದಾರರನ್ನ ನೇಮಿಸಿದ್ರು. ಗಾಂಜಾ ಸೇರಿ ಅಪರಾಧ ಕೃತ್ಯಗಳಿಗೆ ಮಾಹಿತಿ ನೀಡವಂತೆ ತರಬೇತಿ ನೀಡಿದ್ರು. ಈಗ ಅದೇ ಮಾಹಿತಿದಾರರೇ ನೀಡಿದ್ದ ಖಚಿತ ಮಾಹಿತಿ ಮೇರೆಗೆ ಈಗ ಈ ಮೂವರು ಬಲೆಗೆ ಬಿದ್ದಿದಾರೆ. ಬಂಧಿತರಿಂದ 2 ಲಕ್ಷಕ್ಕೂ ಅಧಿಕ ಮೌಲ್ಯದ
19 ಕೆಜಿ 800 ಗ್ರಾಂ. ಗಾಂಜಾ ಮತ್ತು1280 ರೂ. ಹಣ ಸೀಜ್ ಮಾಡ್ಲಾಗಿದೆ. ಈ ಡ್ರಗ್ಸ್ ಜಾಲ ಬೇಧಿಸೋಕೆ ನೆರವಾದ ಮಾಹಿತಿದಾರರ ಬಗ್ಗೆ ಪೊಲೀಸರು ಯಾವುದೇ ಕಾರಣಕ್ಕೂ ಸುಳಿವು ಬಿಟ್ಟುಕೊಟ್ಟಿಲ್ಲ. ಹಾಗೇ ಮಾಹಿತಿದಾರರ ಬಗ್ಗೆ ಸುಳಿವು ನೀಡದಂತೆ ಎಲ್ಲ ಅಧಿಕಾರಿಗಳಿಗೂ ತಾಕೀತು ಕೂಡ ಮಾಡಿದಾರೆ. ಕಮೀಷನರ್ ನೇಮಿಸಿದ್ದ ಮಾಹಿತಿದಾರರಿಂದಾಗಿ ಕೆಲವೇ ದಿನಗಳಲ್ಲಿ 3 ಕೇಸ್ ಗಳನ್ನ ಪತ್ತೆ ಮಾಡಿರೋದು ಅವಳಿನಗರ ಪೊಲೀಸರ ಬಗ್ಗೆ ಹೆಮ್ಮೆಪಡುವಂತೆ ಮಾಡಿದೆ. ಹಾಗಾಗಿ ಈ ಪ್ರಕರಣ ಬೇಧಿಸಿದ 2 ಪೊಲೀಸ ತಂಡಕ್ಕೆ ತಲಾ 10 ಸಾವಿರ ನಗದು ಪುರಸ್ಕಾರ ಕೂಡ ನೀಡಲಾಗಿದೆ. ಇದಷ್ಟೇ ಅಲ್ಲ, ಈ ಕ್ರೆಡಿಟ್ ಸಾರ್ವಜನಿಕರಿಗೂ ಸಿಗ್ಬೇಕು ಅಂತಿದಾರೆ ಕಮೀಷನರ್.
ಎಂ.ಎನ್ ನಾಗರಾಜ, ಹು-ಧಾ ಪೊಲೀಸ್ ಕಮೀಷನರ್ ನಿಜ ಅಲ್ವೇ.. ಪೊಲೀಸರ ಜತೆಗೆ ಸಾರ್ವಜನಿಕರ ಸಹಭಾಗಿತ್ವವಿದ್ರೇ ನಿಜಕ್ಕೂ ಎಂಥೆಂತ ಕಠಿಣ ಪ್ರಕರಣಗಳನ್ನೂ ಬೇಧಿಸೋದಕ್ಕೆ ಸಾಧ್ಯ. ಇದಕ್ಕೆ ಡ್ರಗ್ಸ್ ಮಾಫಿಯಾಗೆ ಕೊಕ್ಕೆ ಹಾಕಿದ ಈ ಪ್ರಕರಣವೇ ಸಾಕ್ಷಿ.
bigtvnews | Hubli Dharwad News | Kannada News | Karnataka News Hubli News | News In Hubli | Local news





