Breaking News

ಮಳೆಪ್ಪಜ್ಜನ ಮಠದ ಪೀಠಾಧಿಪತಿ ವಿಧಿವಶ

ಧಾರವಾಡ: ತಾಲೂಕಿನ ನರೇಂದ್ರ ಗ್ರಾಮದ ಮಳೆಪ್ಪಜ್ಜನ ಮಠದ ಪೀಠಾಧಿಪತಿ ವೇ.ಮೂ. ದುಂಡಯ್ಯ ಹಿರೇಮಠ (96) ಅವರು ಲಿಂಗೈಕ್ಯರಾಗಿದ್ದಾರೆ.

ಕಳೆದ ಕೆಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು, ಪತ್ನಿ, ಮೂವರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಸಂಖ್ಯಾತ ಭಕ್ತ ಸಮೂಹವನ್ನು ಅಗಲಿದ್ದಾರೆ. ಹಾಲಿ ಪೀಠಾಧ್ಯಕ್ಷರಾದ ಶ್ರೀ ಸಂಗಮೇಶ ಸ್ವಾಮೀಜಿ ಅವರು, ದುಂಡಯ್ಯ ಸ್ವಾಮೀಜಿಯವರ ಮೊಮ್ಮಗ.

ಮೌನಯೋಗಿ ಮಹಾಂತ ಶಿವಯೋಗಿ ಅವರ ಪೂರ್ವಾಶ್ರಮದ ಸಹೋದರರಾದ ಶ್ರೀ ದುಂಡಯ್ಯ ಹಿರೇಮಠ (ಸ್ವಾಮೀಜಿ), ಮಹಾಂತ ಶಿವಯೋಗಿಗಳು ಲಿಂಗೈಕ್ಯರಾದ ನಂತರ ಮಳೆಪ್ಪಜ್ಜನ ಮಠದ ಉತ್ತರಾಧಿಕಾರಿ ಆಗಿದ್ದರು. ಗೃಹಸ್ಥರಾದ ದುಂಡಯ್ಯ ಸ್ವಾಮೀಜಿಗಳು ತಮ್ಮ ಜೀವನದುದ್ದಕ್ಕೂ ಮಠದ ಕಲ್ಯಾಣ ಮಾಡುತ್ತ ಭಕ್ತರ ಪರಮಗುರುಗಳಾಗಿದ್ದರು.

Share News

About Shaikh BigTv

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *