ಅಧಿಕಾರಿಗಳಿರೋದೇ ಜನರ ಸೇವೆ ಮಾಡೋದಕ್ಕೆ. ತಾವು ಸಂಚರಿಸೋ ಕಾರಿನಿಂದ ಹಿಡಿದು ಪ್ರತಿಯೊಂದು ಸೌಲಭ್ಯಗಳನ್ನ ಅಧಿಕಾರಿಗಳು ಪಡೆಯೋದೇ ಜನ ಕಟ್ಟೋ ಟ್ಯಾಕ್ಸ್ ನಿಂದ. ಆದ್ರೇ, ಇದನ್ನ ಮರೆತು ಕೆಲ ಐಎಎಸ್ ಶ್ರೇಣಿಯ ಅಧಿಕಾರಿಗಳು ಜನರನ್ನ ಹತ್ತಿರಕ್ಕೆ ಸೇರಿಸೋದಿಲ್ಲ. ಅದಕ್ಕಾಗಿಯೇ ಸರ್ಕಾರ ಮಾಡಿರೋ ರೂಲ್ಸ್ ಈಗ ಹಳ್ಳಿ ಜನರ ಬದುಕನ್ನ ಹಸನು ಮಾಡುವತ್ತ ದಾಪುಗಾಲು ಇಡ್ತಿದೆ.
ರೀ ಮೇಡಂ.. ನಾವೂ ನಿಮ್ಮಂಗೇ ಜಿಲ್ಲಾಧಿಕಾರಿ ಆಗ್ಬೇಕೆಂದ್ರೇ ಏನ್ಮಾಡ್ಬೇಕ್ರೀ.. ವಿದ್ಯಾರ್ಥಿನಿಯ ಪ್ರಶ್ನೆ ತೂರಿ ಬರ್ತಿದ್ದಂತೆಯೇ ಯಾವ ಹಮ್ಮುಬಿಮ್ಮು ಇಲ್ಲದೇ ಅಷ್ಟೇ ಪ್ರೀತಿಯಿಂದಲೇ ಡಿಸಿ ಆಗೋದ್ಹೇಗೆ, ಯುಪಿಎಸ್ ಸಿ ಪರೀಕ್ಷೆಗೆ ಸಿದ್ಧತೆ ನಡೆಸೋದ್ಹೇಗೆ ಅಂತ ಹೇಳ್ತಾಯಿದರು ಈ ಜಿಲ್ಲಾಧಿಕಾರಿ. ಧಾರವಾಡ ಡಿಸಿ ದೀಪಾ ಚೋಳನ್ ವಿದ್ಯಾರ್ಥಿಗಳೊಂದಿಗೆ ಬೆರೆತಿ, ಪಾಠ ಮಾಡಿದ್ರು. ವಿದ್ಯಾರ್ಥಿಗಳ ಆಸಕ್ತಿಯಂತೂ ಇಮ್ಮಡಿಯಾಗಿತ್ತು. ಈ ಅಪರೂಪದ ದೃಶ್ಯಕ್ಕೆ ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ಹಿರೇಹೊನ್ನಳ್ಳಿ ಸಾಕ್ಷಿಯಾಯಿತು. ಮಕ್ಕಳ ಜತೆ ಮಕ್ಕಳಂತಾಗೋದಂದ್ರೇ ಇದೇ ನೋಡಿ. ಪಾಠ ಹೇಳೋದಲ್ಲದೇ ರಾಣಿ ಚೆನ್ನಮ್ಮ ಮಹಿಳಾ ವಿದ್ಯಾರ್ಥಿ ವಸತಿ ನಿಲಯದಲ್ಲಿಯೇ ಒಂದು ದಿನ ವಾಸ್ತವ್ಯ ಮಾಡಿ, ಮಕ್ಕಳೊಂದಿಗೆ ಬೆರೆತು ಊಟ-ಉಪಹಾರ ಸೇವಿಸಿದ್ರು.
ಪ್ರಭಾವತಿ, ವಿದ್ಯಾರ್ಥಿನಿ
ಇಷ್ಟಾಗ್ತಿದ್ದಂತೆಯೇ ಶಾಲೆಯ ಮುಂದೆ ಜನಸಂಪರ್ಕ ಸಭೆ ನಡೆಸಿದ ಡಿಸಿಗಳಿಗೇ ಜನರು ಹತ್ತಾರು ಪ್ರಶ್ನೆಗಳನ್ನ ಕೇಳಿದ್ರು. 76ಕ್ಕೂ ಹೆಚ್ಚು ಅಹವಾಲು ಸಲ್ಲಿಸಿದ್ರು. ಊರಿಗೆ ಬಸ್ ಬರೋದು ಕಡಿಮೆ, ಕಾಲೇಜಿಗೆ ಹೋಗೋ ವಿದ್ಯಾರ್ಥಿಗಳಿಗೆ ತೊಂದರೆಯಾಗ್ತಿದೆ ಅಂತ ರೈತ ಹೇಳ್ತಿದ್ದಂತೆಯೇ ಸ್ಥಳದಲ್ಲಿಯೇ ಬಸ್ ಗಳ ಟ್ರಿಪ್ ಹೆಚ್ಚಿಸುವಂತೆ ಡಿಸಿ ಅಧಿಕಾರಿಗಳಿಗೆ ತಾಕೀತು ಮಾಡಿದ್ರು. ಕಲಘಟಗಿ ತಾಲೂಕು ಬರ ಪೀಡಿತವೆಂದು ಘೋಷಿಸಿ, ತಹಶೀಲ್ದಾರ್ ಕಚೇರಿಯಲ್ಲಿ ಲಂಚಾವತಾರವಿದೆ, ಊರಿಗೆ ಕರೆಂಟ್ ಇದ್ದು ಇಲ್ದಂಗೇ, ಕುಡಿಯೋಕೆ ನೀರು ಬಿಡ್ತಿಲ್ಲ, ಊರಲ್ಲೊಂದು ಸ್ಮಶಾನವಿಲ್ಲ, ಹೀಗೇ ಸಮಸ್ಯೆಗಳನ್ನ ಡಿಸಿ ಮೇಡಂ ಗಮನಕ್ಕೆ ಊರ ಜನ ತಂದ್ರು. ಎಲ್ಲವನ್ನೂ ಆಲಿಸಿದ ಜಿಲ್ಲಾಧಿಕಾರಿ ದೀಪಾ ಚೋಳನ್, ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಎಲ್ಲವನ್ನೂ ಪರಿಹರಿಸೋದಕ್ಕೆ ತಾಕೀತು ಮಾಡ್ತಿದ್ರು. ಎಲ್ಲಕ್ಕಿಂತ ಮುಖ್ಯವಾಗಿ 2016-17 ಮತ್ತು 2017-18ರ ಸಾಲಿನ ರೈತರ ಬೆಳೆವಿಮೆ 66 ಕೋಟಿ ರೂ. ಬಾಕಿಯಿದೆ. ವಿಮಾ ಕಂಪನಿಗಳು ಇನ್ನೂ ಇದನ್ನ ಪಾವತಿ ಮಾಡಿಲ್ಲ. ಜತೆಗೆ ತಾಂತ್ರಿಕ ತೊಂದರೆಯಿಂದಾಗಿ ತಡವಾಗಿದ್ದು, ಆದಷ್ಟು ಬೇಗ ರೈತರ ಅಕೌಂಟ್ ಗಳಿಗೆ ಬೆಳೆ ವಿಮೆ ಜಮಾ ಆಗುತ್ತೆ ಅನ್ನೋ ಭರವಸೆಯನ್ನ ಡಿಸಿ ನೀಡಿದ್ರು.
ದೀಪಾ ಎಂ. ಚೋಳನ್, ಜಿಲ್ಲಾಧಿಕಾರಿಗಳು
ಜನ ಸಂಪರ್ಕ ಸಭೆಯಾದ್ಮೇಲೆ, ಸ್ವತಃ ಡಿಸಿಯವರೇ ಗರ್ಭಿಣಿಯರಿಗೆ ಉಡಿ ತುಂಬಿ ಹರಿಸಿದ್ರು. ಹೀಗೆ ಮಾಡೋವಾಗ ಡಿಸಿಯಾಗಿದ್ರೂ ಸಹ ಸಹೋದರಿಯಂತೆ, ತಾಯಿಯಂತೆ, ಬಂಧುವಿನಂತೆ ಆರತಿ ಬೆಳಗ್ತಾಯಿದ್ರು. ಜಿಲ್ಲೆಗೇ ಡಿಸಿ ಆದ್ರೇನೂ, ತಾನು ಹೆಣ್ಣುಜೀವ ಅನ್ನೋದು ಅವರ ಪ್ರತಿ ನಡೆ-ನುಡಿಯಲ್ಲಿ ಕಾಣ್ತಾಯಿತ್ತು. ಜಿಲ್ಲಾ ಪಂಚಾಯತ್ ಸಿಇಒ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿ ಇಡೀ ಜಿಲ್ಲೆಯ ಅಧಿಕಾರಿಗಳೆಲ್ಲ ಡಿಸಿಗೆ ಸಾಥ್ ಕೊಟ್ರು. ಸರ್ಕಾರ ಪ್ರತಿ ತಿಂಗಳು ಒಂದೊಂದು ಗ್ರಾಮದಲ್ಲಿ ವಾಸ್ತವ್ಯ ಮಾಡುವಂತೆ ಆದೇಶಿಸಿದೆ. ಗ್ರಾಮದಲ್ಲೇ ಇದ್ದು, ಜನರೊಂದಿಗೆ ಬೆರೆತು ಅವರ ಸಮಸ್ಯೆಗಳನ್ನ ಪರಿಹರಿಸಲು ಸೂಚಿಸಿದೆ. ಹಾಗಾಗಿ ಜಿಲ್ಲಾಧಿಕಾರಿಗಳು ಒಂದು ದಿನ ಇದೇ ಗ್ರಾಮ ವಿದ್ಯಾರ್ಥಿಗಳ ವಸತಿ ನಿಲಯದಲ್ಲೇ ವಾಸ್ತವ್ಯ ಹೂಡಿದ್ರು. ವಿದ್ಯಾರ್ಥಿಗಳು, ಅಧಿಕಾರಿಗಳೊಂದಿಗೆ ಕೆಳಗೇ ಕುಳಿತು ಉತ್ತರಕರ್ನಾಟಕದ ಸ್ಪೆಷಲ್ ಗೋಧಿ ಹುಗ್ಗಿ ಭೋಜನ ಸವೆದ್ರು. ಆಡಳಿತ ವ್ಯವಸ್ಥೆ ಸರಿಯಿದ್ರೇ ಹಳ್ಳಿ ಜನ ಸಮಸ್ಯೆಗಳನ್ನ ಅನುಭವಿಸೋದಿಲ್ಲ. ಆದ್ರೀಗ, ಡಿಸಿಗಳೇ ಹಳ್ಳಿಯಲ್ಲಿ ವಾಸ್ತವ್ಯ ಮಾಡಿ ಜನರ ಸಮಸ್ಯೆ ಅರಿತಿದಾರೆ. ಇದರಿಂದಾಗಿ ಈ ಜನರ ಸಮಸ್ಯೆಗಳು ಎಷ್ಟರಮಟ್ಟಿಗೆ ಪರಿಹಾರವಾಗ್ತವೋ ನೋಡ್ಬೇಕು. ಅದೇನೇಯಿದ್ರೂ ಡಿಸಿಗಳು ಇಷ್ಟೊಂದು ಸಹಜವಾಗಿರೋದಂತೂ ಈ ಮುಗ್ಧ ಜನರ ಮುಖದಲ್ಲಂತೂ ಮಂದಹಾಸ ಮೂಡಿಸಿರೋದಂತೂ ಸುಳ್ಳೇನಲ್ಲ.
bigtvnews | Hubli Dharwad News | Kannada News | Karnataka News Hubli News | News In Hubli | Local news





