Breaking News

ಜನಾರ್ದನ ರೆಡ್ಡಿ ಸಿಸಿಬಿಗೆ ಬರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ -ಅಲೋಕ್ ಕುಮಾರ್

ಸಿಸಿಬಿ ಕಚೇರಿಗೆ ತಮ್ಮ ಲಾಯರ್​ ಚಂದ್ರಶೇಖರ್​ ಜೊತೆ ಹಾಜರಾಗುವುದಾಗಿ ಅಜ್ಞಾತ ಸ್ಥಳದಿಂದ ಮಾಜಿ ಸಚಿವ ಜನಾರ್ದನ ರೆಡ್ಡಿ ಈಗ್ಗೆ ಕೆಲ ಕ್ಷಣಗಳ ಹಿಂದೆ ವಿಡಿಯೋ ಮೂಲಕ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಹೆಚ್ಚುವರಿ ಪೊಲೀಸ್​ ಆಯುಕ್ತ ಅಲೋಕ್ ಕುಮಾರ್ ಅವರು ಜನಾರ್ದನ ರೆಡ್ಡಿ ನಮ್ಮ ಕಚೇರಿಗೆ ಬರುವ ಬಗ್ಗೆ ಸಿಸಿಬಿಗೆ ಯಾವುದೇ ಮಾಹಿತಿ ಇಲ್ಲ ಅಂತಾ ಹೇಳಿದ್ದಾರೆ.ಸಿಸಿಬಿ ಕಚೇರಿಯಲ್ಲಿ ಮಾತನಾಡಿದ ಅವರು, ಜನಾರ್ದನ ರೆಡ್ಡಿ ಬರುವ ಬಗ್ಗೆ ಸಿಸಿಬಿಗೆ ಯಾವುದೇ ಮಾಹಿತಿ ಇಲ್ಲ. ಒಂದು ವೇಳೆ ಬಂದ್ರೆ ಸಿಸಿಬಿ ಮುಂದಿನ ಕ್ರಮ ಕೈಗೊಳ್ಳುತ್ತೆ. ಅಂತಾ ಹೇಳಿದರು. ಆ್ಯಂಬಿಡೆಂಟ್​ ಕಂಪನಿ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾನುವಾರ ವಿಚಾರಣೆಗೆ ಆಗಮಿಸುವಂತೆ ರೆಡ್ಡಿಗೆ ಸಿಸಿಬಿ ನೋಟಿಸ್​ ನೀಡಿದೆ.

Share News

About Shaikh BIG TV NEWS, Hubballi

Check Also

ರೌಡಿಶೀಟರ್ ಹ್ಯಾರಿಸ್ ಪಠಾಣ್ ಗೂಂಡಾ ಕಾಯ್ದೆ ಅಡಿ ಬಂಧನ…

ಹ್ಯಾರಿಸ್ ಪಠಾಣ್ ಹಲವು ವರ್ಷಗಳಿಂದ: ಕ್ರಿಕೆಟ್ ಬೆಟ್ಟಿಂಗ್ ಬಡ್ಡಿ ವ್ಯವಹಾರ ಅಪಹರಣ ಕೊಲೆ ಪ್ರಕರಣಗಳು.. ಒಟ್ಟು 11 ಪ್ರಕರಣಗಳು ವಿವಿಧ …

Leave a Reply

Your email address will not be published. Required fields are marked *