Breaking News

ತಣ್ಣಗಾಗದ ಕಬ್ಬಿನ ಕಿಚ್ಚು, ರೈತರಿಂದ ಅಹೋರಾತ್ರಿ ಧರಣಿ.

ಬೆಳಗಾವಿ :ಕಬ್ಬು ಬೆಳೆ ಬಾಕಿ ಸಂಬಂಧ ಹಾಗೂ ಬೆಂಬಲ ಬೆಲೆ ಸೂಚಿಸಲು ಸಿಎಂ ಕುಮಾರಸ್ವಾಮಿ ನಡೆಸಿದ ಸಭೆ ತೃಪ್ತಿದಾಯಕವಾಗಿಲ್ಲ ಅಂತಾ ಅಸಮಾಧಾನಗೊಂಡಿರೋ ಬೆಳಗಾವಿ ರೈತ ಮುಖಂಡರು ಅಹೋರಾತ್ರಿ ಧರಣಿ ನಡೆಸಿದ್ರು. ಜಿಲ್ಲಾಧಿಕಾರಿ ಕಚೇರಿ ಪ್ರತಿಭಟನೆ ನಡೆಸಿದ ರೈತರು ಅಲ್ಲೇ ಊಟ ಮಾಡಿ ಹೋರಾಟ ಮಾಡಿದ್ರು. ರೈತರ ಹೋರಾಟಕ್ಕೆ ಕರವೇ ಸಾಥ್​ ನೀಡಿದ್ದು, ನಗರದ ಚೆನ್ನಮ್ಮ ವೃತ್ತದಿಂದ ಪಂಜಿನ ಮೆರವಣಿಗೆ ನಡೆಸಿದರು. ಪ್ರತಿಭಟನಾ ಮೆರವಣಿಗೆಯಲ್ಲಿ ಮಹಾಂತೇಶ ರಣ ಗಟ್ಟಿಮಠ , ವಾಜೀದ್ ಹಿರೆಕೋಡಿ, ಆನಂದ ಬಡಿಗೇರ ಮಲ್ಲಿಕಾ ವಾಗಿ , ಭಾರತಿ ಶೆಟ್ಟಿ ,ಸೇರಿದಂತೆ ಹಲವು ಕಾರ್ಯಕರ್ತರು ಪಾಲ್ಗೊಂಡಿದ್ದರು. ಇನ್ನು ರೈತರು ಇಂದು ಸಂಜೆಯವರೆಗೆ ಪ್ರತಿಭಟನೆ ಮುಂದುವರೆಸಲು ನಿರ್ಧರಿಸಿದ್ದಾರೆ.

Share News

About Shaikh BIG TV NEWS, Hubballi

Check Also

ಒಂದು ಬೆಕ್ಕಿನ ಗರ್ಭ… ಎರಡು ಮನೆಗಳ ಗಲಾಟೆ! ಕೊನೆಗೆ ಪೊಲೀಸರೇ ‘ವಿಚಿತ್ರ ತೀರ್ಪು’ ಕೊಟ್ಟ ಕಥೆ!

ನಾಲ್ಕು ಮರಿಗಳು ಹುಟ್ಟಿದವು… ಆದರೆ ಕಸ್ಟಡಿ ಯಾರಿಗೆ..? ಪೊಲೀಸರನ್ನೇ ಕಂಗೆಡಿಸಿದ ಪ್ರಕರಣ! ಬೆಕ್ಕು ಗರ್ಭಿಣಿ… ನೆರೆಹೊರೆಯವರ ಗಲಾಟೆ! ಬೆಂಗಳೂರಿನಲ್ಲಿ ‘ವಿಚಿತ್ರ’ …

Leave a Reply

Your email address will not be published. Required fields are marked *