ದೆಹಲಿ: ರಫೇಲ್ ಡೀಲ್ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತೆ ಗುಡುಗಿದ್ದಾರೆ. ರಫೇಲ್ ಒಪ್ಪಂದ ಹಾಗೂ ನೋಟು ಅಮಾನ್ಯೀಕರಣ ಎರಡು, ಭಾರತ ವಿರುದ್ಧ ನಡೆಸಿದ ಅಪರಾಧ ಹಾಗೂ ಹಗರಣ. ಈ ಪ್ರಕರಣಗಳ ಅಪರಾಧಿಗಳಿಗೆ ಮುಂದೆ ತಕ್ಕ ಶಿಕ್ಷೆಯಾಗುತ್ತೆ ಅಂತ ರಾಹುಲ್ ಹೇಳಿದ್ದಾರೆ. ಇನ್ನು ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ. ಮಾಜಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ರಫೇಲ್ನಿಂದ ತಪ್ಪಿಸಿಕೊಳ್ಳಲು ಒಪ್ಪಂದದಿಂದ ಅಂತರ ಕಾಯ್ದುಕೊಂಡರು. ಈಗ ಕೇಂದ್ರದ ಮಾಜಿ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯನ್ ಕೂಡ ನೋಟ್ ಬ್ಯಾನ್ ವಿಷಯದಲ್ಲಿ ಅದೇ ಹಾದಿಯಲ್ಲಿದ್ದಾರೆ. ನೋಟ್‌ಬ್ಯಾನ್ ಬಗ್ಗೆ ವಿರೋಧ ಹೊಂದಿದ್ದ ಸುಬ್ರಮಣಿಯನ್ ಯಾಕೆ ರಾಜೀನಾಮೆ ನೀಡಲಿಲ್ಲ ಅನ್ನೋದು ನನಗೆ ಈಗಲೂ ಆಶ್ಚರ್ಯವೆನಿಸುತ್ತಿದೆ. ಡೋಂಟ್ ವರಿ ಇಂಡಿಯಾ, ಈ ಅಪರಾಧಿಗಳ ಬಗ್ಗೆ ತನಿಖೆ ನಡೆಸಿ ಶಿಕ್ಷೆ ನೀಡಲಾಗುತ್ತೆ ಅಂತ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73
bigtvnews | Hubli Dharwad News | Kannada News | Karnataka News Hubli News | News In Hubli | Local news





