ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿಯವರು ಉತ್ತರ ಕರ್ನಾಟಕಕ್ಕೆ ಬರುವುದಾದರೇ ಕಳಸಾ ಬಂಡೂರ ಇತ್ಯರ್ಥ ಮಾಡಬೇಕು ಅಲ್ಲದೇ ರೈತರ ಸಾಲ ಮನ್ನಾಮಾಡಬೇಕ ಇಲ್ಲವಾದರೇ ಪ್ರಧಾನಿಯವರು ಉತ್ತರ ಕರ್ನಾಟಕಕ್ಕೆ ಬರುವ ಅವಶ್ಯಕತೆ ಇಲ್ಲ ಒಂದು ವೇಳೆ ಯಾವುದೇ ನಿರ್ಧಾರ ಕೈಗೊಳ್ಳದೇ ಆಗಮಿಸಿದರೇ ಫೆ. 10 ರಂದು ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಕರ್ನಾಟಕ ಕಳಸಾ ಬಂಡೂರಿ ರೈತ ಹೋರಾಟ ಸಮಿತಿಯ ಅಧ್ಯಕ್ಷ ಸಿದ್ಧು ತೇಜಿ ತಿಳಿಸಿದರು.ನಗರದಲ್ಲಿಂದು ಸುದ್ಧಿಗೋಷ್ಟಿ ಮಾತನಾಡಿದ ಅವರು,ಕಳೆದ 40 ವರ್ಷಗಳಿಂದ 4 ಜಿಲ್ಲೆ 9 ತಾಲೂಕುಗಳಲ್ಲಿ ಕಳಸಾ ಬಂಡೂರಿ ಮಹದಾಯಿಗಾಗಿ ಮೂರು ವರ್ಷದಿಂದ ನಿರಂತರ ಹೋರಾಟ ನಡೆಸುತ್ತಿದ್ದರೂ ಕೇಂದ್ರ ಸರ್ಕಾರ ಇತ್ಯರ್ಥಗೊಳಿಸುವ ಕುರಿತು ಯಾವುದೇ ಧ್ವನಿ ಎತ್ತುತ್ತಿಲ್ಲ ಎಂದರು.ರೈತರಿಗೆ ಕೇಂದ್ರ ಬಜೆಟನಲ್ಲಿ 6 ಸಾವಿರ ರೂಪಾಯಿ ನೀಡುವ ಮೂಲಕ ಮೋಸ ಮಾಡಿದೆ. ಮೋದಿಯವರು ಉತ್ತರ ಕರ್ನಾಟಕಕ್ಕೆ ಬರುವುದಾದರೇ ಕಳಸಾ ಬಂಡೂರ ಇತ್ಯರ್ಥ ಮಾಡಬೇಕು ಅಲ್ಲದೇ ರೈತರ ಸಾಲ ಮನ್ನಾಮಾಡಬೇಕ ಇಲ್ಲವಾದರೇ ಪ್ರಧಾನಿಯವರು ಉತ್ತರ ಕರ್ನಾಟಕಕ್ಕೆ ಬರುವ ಅವಶ್ಯಕತೆ ಇಲ್ಲ ಎಂದು ಅವರು ತಿಳಿಸಿದರು. ಒಂದು ವೇಳೆ ಮಹದಾಯಿ ಹಾಗೂ ರೈತರ ಸಾಲ ಮನ್ನಾ ಕುರಿತು ಇತ್ಯರ್ಥದ ನಿರ್ಧಾರ ಕೈಗೊಳ್ಳದೇ ಇದ್ದಲ್ಲಿ ಮಹದಾಯಿ ಹೋರಾಟ ಸಮಿತಿಯಿಂದ ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸಲಾಗುವುದು ಪ್ರತಿಭಟನೆಯಲ್ಲಿ ಸುಮಾರು 300 ಜನ ಭಾಗವಹಿಸಿವ ನಿರೀಕ್ಷೆ ಇದೆ ಎಂದರು. ಸಂಸದ ಜೋಶಿಯವರ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಯಾವುದೇ ಶ್ರಮವಹಿಸಿಲ್ಲ ಇಷ್ಟು ವರ್ಷದ ಮಹದಾಯಿ ಹೋರಾಟದ ಬಗ್ಗೆ ಯಾವುದೇ ದ್ವನಿ ಎತ್ತುತ್ತಿಲ್ಲ ಎಂದು ಅವರು ಆರೋಪಿಸಿದರು. ಎರಡು ಹೆಕ್ಟೇರ್ ಜಮೀನಿಗೆ ಆರು ಸಾವಿರ ಹಣ ನೀಡಿರುವುದು ಕೇವಲ ಒಂದು ಎಕರೇ ಜಮೀನ ಕೃಷಿಗೆ ಕೂಡ ಸಾಲುತ್ತಿಲ್ಲ ಇಂತಹ ಮೂಗಿಗೆ ತುಪ್ಪ ಹಚ್ಚುವ ನಿರ್ಧಾರ ಕೈಗೊಂಡಿರುವುದು ಖಂಡನೀಯವಾಗಿದೆ ಎಂದರು.ಈ ಸಂದರ್ಭದಲ್ಲಿ ಬಾಬಾಜಾನ ಮುಧೋಳ, ಎ.ಎನ್.ಖಾಜಿ ಸೇರಿದಂತೆ ಇತರರು ಇದ್ದರು.
Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73
bigtvnews | Hubli Dharwad News | Kannada News | Karnataka News Hubli News | News In Hubli | Local news





