
ಧಾರವಾಡ : ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರ ಬೆಂಬಲಿಗ ಗಜಾನನ ಅನ್ವೇಕರ್ ಎಂಬುವವರು ಶಿಕ್ಷಕರಿಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಕರ್ನಾಟಕ ರಾಜ್ಯ ಶಿಕ್ಷಣ ಸಂಸ್ಥೆಗಳ ನೌಕರರ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಶಿಕ್ಷಕರ ಸಂಘದ ಕೋಶ್ಯಾಧ್ಯಕ್ಷರಾದಂತಹ ಆರ್. ಎಚ್ ಪಾಟೀಲ್ ಅವರಿಗೆ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರ ವಿರುದ್ಧ ಸಂಘ ಕಟ್ಟಿಕೊಂಡು ಚುನಾವಣೆ ಮಾಡುತ್ತಿದ್ದೀಯಾ ಎಂದು ಅವಾಚ್ಯವಾಗಿ ನಿಂದಿಸಿದ್ದಲ್ಲದೆ ಪ್ರಾಣ ಬೆದರಿಕೆಯನ್ನೂ ಹಾಕಿದ್ದಾರೆ ಎಂದು ಕರ್ನಾಟಕ ರಾಜ್ಯ ಶಿಕ್ಷಣ ಸಂಸ್ಥೆಗಳ ನೌಕರರ ಸಂಘದ ವತಿಯಿಂದ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಶಿಕ್ಷಕರಿಗೆ ರಕ್ಷಣೆ ಇಲ್ಲದಂತಾಗಿದೆ ಶಿಕ್ಷಕರಿಗೆ ಪ್ರಾಣ ಬೆದರಿಕೆ ಹಾಕಿದ ವ್ಯಕ್ತಿಯ ಮೇಲೆ ಹಾಗೂ ಪ್ರಚೋದನೆ ನೀಡಿದ ವರ ಮೇಲೆ ಕೂಡಲೇ ಕಾನೂನು ಕ್ರಮವನ್ನು ಕೈಗೊಂಡು ಅವರನ್ನು ಬಂಧಿಸಬೇಕೆಂದು ಆಗ್ರಹಿಸಿದರು.
ಈಗಾಗಲೇ ಈ ಕುರಿತು ಹುಬ್ಬಳ್ಳಿಯ ಅಶೋಕನಗರದ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು ಇನ್ನು ಪೊಲೀಸ್ ಠಾಣೆಯಿಂದ ಬೇಲೂರ್ ಪಡೆದಂತಹ ಗಜಾನನ ಅವರು ಮತ್ತೆ ಇನ್ನೊಬ್ಬ ಶಿಕ್ಷಕರ ಆದಂತಹ ಗಡಿದಿಣಿ ಅವರಿಗೂ ಸಹ ಧಮ್ಕಿ ಹಾಕಿರುತ್ತಾರೆ ಪ್ರಭಾವಿಗಳ ಹೆಸರು ಹೇಳಿಕೊಂಡು ಗೂಂಡಾ ವರ್ತನೆ ತೋರುತ್ತಿರುವುದು ಖಂಡನೀಯ ಕೂಡಲೇ ಗಜಾನನ ಅನ್ವೇಕರ ಅವರನ್ನು ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ಕರ್ನಾಟಕ ರಾಜ್ಯ ಶಿಕ್ಷಣ ಸಂಸ್ಥೆಗಳ ನೌಕರರ ಸಂಘದ ಕಾರ್ಯಕರ್ತರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ನೊಂದ ಶಿಕ್ಷಕರಾದ ಆರ್.ಎಚ್ ಪಾಟೀಲ್, ಎಸ್.ಎನ್ ಗಡಿದಿನ್ನಿ,
bigtvnews | Hubli Dharwad News | Kannada News | Karnataka News Hubli News | News In Hubli | Local news





