Breaking News

ಐದು ಜನ ಮೊಬೈಲ್ ಕಳ್ಳರ ಬಂಧನ : 1.80 ಲಕ್ಷ ಮೌಲ್ಯದ 14 ಮೊಬೈಲ್ ವಶ

ಹುಬ್ಬಳ್ಳಿ: ಮೊಬೈಲ್‍ಗಳನ್ನು ಕಳವು ಮಾಡಿ ಆಟೋರಿಕ್ಷಾದಲ್ಲಿ ಬರುತ್ತಿದ್ದ 5 ಜನ ಆರೋಪಿಗಳನ್ನು ಬೆಂಡಿಗೇರಿ ಠಾಣೆಯ ಪೋಲಿಸರು ಬಂಧಿಸಿದ್ದಾರೆ.

ನ.20 ರಂದು ಹಳೇಮಂಟೂರ ರೋಡನಲ್ಲಿ ಐದು ಜನರು ಎಲ್ಲಿಂದಲೋ ಮೊಬೈಲ್ ಗಳನ್ನು ಕಳವು ಮಾಡಿಕೊಂಡು ಆಟೋರಿಕ್ಷಾದಲ್ಲಿ ಬರುತ್ತಿದ್ದಾರೆಂಬ ಖಚಿತ ಮಾಹಿತಿ ಮೆರೆಗೆ ಬೆಂಡಿಗೇರಿ ಪೋಲಿಸ ಠಾಣೆಯ ಪಿಐ ಶ್ಯಾಂರಾಜ ಸಜ್ಜನ ಅವರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಐದು ಜನರನ್ನು ಬಂಧಿಸಿ ಅವರಿಂದ 1.80 ಲಕ್ಷ ಮೌಲ್ಯದ 14 ಮೊಬೈಲ್ ಮತ್ತು ಕೃತ್ಯಕ್ಕೆ ಬಳಸಿದ ಆಟೋರಿಕ್ಷಾವನ್ನು ವಶಪಡಿಸಿಕೊಂಡು, ಆರೋಪಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಈ ಪ್ರಕರಣದಲ್ಲಿ ತನಿಖೆ ನಡೆಸಿರುವ ತಂಡದ ಕಾರ್ಯವನ್ನು ಹು-ಧಾ ಪೋಲಿಸ ಆಯಕ್ತರು ಶ್ಲಾಘಿಸಿದ್ದಾರೆ.

Share News

About BigTv News

Check Also

ಹುಬ್ಬಳ್ಳಿಯಲ್ಲಿ ಮಾಂಜಾ ದಾರಕ್ಕೆ ಮಹಿಳೆ ಬಲಿ..! ಕುತ್ತಿಗೆಗೆ ಸಿಲುಕಿದ ದಾರ, ಲ್ಯಾಬ್ ಟೆಕ್ನಿಷಿಯನ್ ದಾರುಣ ಸಾವು..!

News Audio ಸ್ಕೂಟಿಯಲ್ಲಿ ಲ್ಯಾಬ್‌ಗೆ ತೆರಳುತ್ತಿದ್ದಾಗ ಅವಘಡ | ರಸ್ತೆಯಲ್ಲೇ ತೀವ್ರ ರಕ್ತಸ್ರಾವ, ಮಾಂಜಾ ದಾರದ ಅಪಾಯಕ್ಕೆ ಮತ್ತೊಂದು ಜೀವ …

Leave a Reply

Your email address will not be published. Required fields are marked *