ಧಾರವಾಡ : ಲಿಂಗಾಯತ ಸಮಾಜದ ಮಹಿಳೆಯರನ್ನು ಕ್ರೈಸ್ತ ಸಮುದಾಯಕ್ಕೆ ಮತಾಂತರ ಮಾಡಲಾಗುತ್ತಿದ್ದು, ಲಿಂಗಾಯತ ಸಮಾಜದ ಸ್ವಾಮೀಜಿಗಳು, ಮಠಾಧೀಶರು ಎಲ್ಲಿದ್ದೀರಿ? ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಪ್ರಶ್ನಿಸಿದ್ದಾರೆ.
ಧಾರವಾಡದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮತಾಂತರದ ವಿರುದ್ಧ ಮಠಾಧೀಶರು ಧ್ವನಿ ಎತ್ತಬೇಕಿದೆ. ಮಠ ಬಿಟ್ಟು ಹೊರಗಡೆ ಬನ್ನಿ. ಹಿಂದುತ್ವ ಕಾಪಾಡುವ ಕೆಲಸ ಕೇವಲ ಪ್ರಮೋದ ಮುತಾಲಿಕ್ ಕೆಲಸವಲ್ಲ. ಯಡಿಯೂರಪ್ಪನವರನ್ನು ಬಚಾವ್ ಮಾಡುವುದಷ್ಟೆ ಲಿಂಗಾಯ ಸ್ವಾಮೀಜಿಗಳ ಕೆಲಸವಲ್ಲ. ದೇಶ ರಕ್ಷಿಸುವ ಕೆಲಸ ಮಾಡಬೇಕಿದೆ. ಇಲ್ಲದೇ ಹೋದರೆ ದೊಡ್ಡಮಟ್ಟದಲ್ಲಿ ಮತಾಂತರ ನಡೆಯುತ್ತದೆ. ಕೂಡಲೇ ಸ್ವಾಮೀಜಿಗಳು ಇದರ ವಿರುದ್ಧ ಹೋರಾಟಕ್ಕಿಳಿಯಬೇಕು ಎಂದು ಮುತಾಲಿಕ್ ಕರೆ ನೀಡಿದ್ದಾರೆ….
ಬೈಟ್– ಪ್ರಮೋದ್ ಮುತ್ತಾಲಿಕ್
bigtvnews | Hubli Dharwad News | Kannada News | Karnataka News Hubli News | News In Hubli | Local news

