Breaking News

ಹಿಜಾಬ್ ವಿವಾದ ಕುರಿತು ಇಂದು ಸಂಜೆ ಸಿಎಂ ನೇತೃತ್ವದಲ್ಲಿ ಮಹತ್ವದ ಸಭೆ


ಬೆಂಗಳೂರು : ರಾಜ್ಯದಲ್ಲಿ ‘ಸಮವಸ್ತ್ರ’ ವಿವಾದ ಹಿನ್ನೆಲೆ ಇಂದು ಸಂಜೆ ಸಚಿವರು, ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ಎಸ್ ಪಿಗಳ ಜೊತೆ ಸಿಎಂ ಬೊಮ್ಮಾಯಿ ಮಹತ್ವದ ಸಭೆ ನಡೆಸಲಿದ್ದಾರೆ.

ವರ್ಚುವಲ್ ಮೂಲಕ ಸಭೆ ನಡೆಸಲಿರುವ ಸಿಎಂ ಬೊಮ್ಮಾಯಿ ವಿವಿಧ ಜಿಲ್ಲೆಯ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ಇಂದು ಸಂಜೆ 5 ಗಂಟೆಗೆ ಸಭೆ ನಡೆಯಲಿದೆ ಎಂದು ತಿಳಿದು ಬಂದಿದೆ.

ಹೈಕೋರ್ಟ್‌ ಆದೇಶದ ಬೆನ್ನೆಲ್ಲೇ ಮುಖ್ಯಮಂತ್ರಿಗಳು ಮಹತ್ವದ ಸಭೆ ನಡೆಸಿದ್ದು, ರಾಜ್ಯದಲ್ಲಿ 2 ಹಂತಗಳಲ್ಲಿ ಶಾಲೆ ಆರಂಭಿಸಲಾಗುವುದು. ಮೊದಲ ಹಂತದಲ್ಲಿ ಹೈಸ್ಕೂಲ್‌ ಅಂದ್ರೆ 10ನೇ ತರಗತಿವರೆಗೆ ತರಗತಿಗಳನ್ನ ಆರಂಭಿಸಲಾಗುದು. ನಂತ್ರ ಪಿಯುಸಿ ಪ್ರಾರಂಭಿಸಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

Share News

About admin

Check Also

ಬೆಂಗಳೂರಿನಲ್ಲಿ ನಡೆದ ಸ್ಫೋಟ ಪ್ರಕರಣ: ಜಲಾಲ್ ನ ಬಂಧನ !

ಬೆಂಗಳೂರು: ಪುಲಿಕೇಶಿನಗರದ ಜರ್ಮಿಯಾ ರಸ್ತೆಯ ಕಟ್ಟಡವೊಂದರಲ್ಲಿ ಅ.20ರಂದು ಸಂಭವಿಸಿದ್ದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಯಚೂರಿನ ಜಲಾಲ್ (25) ಎಂಬ ಯುವಕನನ್ನು …

Leave a Reply

Your email address will not be published. Required fields are marked *