Breaking News

ನಡು ರಸ್ತೆಯಲ್ಲಿ ಪತ್ನಿಯ ಹತ್ಯೆ ಮಾಡಿದ ಪತಿರಾಯ

ಬೆಳಗಾವಿ : ಮಹಾನಗರದ ಪ್ರವೇಶ ದ್ವಾರದ ಬಳಿ ನಡು ರಸ್ತೆಯಲ್ಲಿ ಮಹಿಳೆಯ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿದ ಘಟನೆ ಮಧ್ಯಾಹ್ನ ನಡೆದಿದೆ.

ಪತಿಯಿಂದಲೇ ಪತ್ನಿ ಮೇಲೆ ಮಾರಾಕಾಸ್ತ್ರದಿಂದ ಕೊಚ್ಚಿ ಮಾರಣಾಂತಿಕ ಹಲ್ಲೆ ಮಾಡಿ ಕೊಲೆ ಮಾಡಲಾಗಿದ್ದು,ಬೆಳಗಾವಿಯ ಕೋಟೆ ಕರೆ ಬಳಿ ಮಧ್ಯಾಹ್ನ ಎರಡು ಗಂಟೆ ವೇಳೆ ಘಟನೆ ನಡೆದಿದೆ.

24 ವರ್ಷದ ಹೀನಾ ಕೌಸರ್ ಮೇಲೆ ಪತಿ ಮಂಜೂರ್‌ನಿಂದ ಹಲ್ಲೆ ನಡೆದಿದೆ.ಆರೋಪಿ ಪತಿ ಮಂಜೂರ್ ಇಲಾಹಿ ನದಾಫ್ (34) ಪೊಲೀಸರ ವಶದಲ್ಲಿದ್ದು.ಕಳೆದ ನಾಲ್ಕು ವರ್ಷಗಳ ಹಿಂದೆ ದೇವಲಾಪುರದ ಮಂಜೂರ್ ಜೊತೆ ವಿವಾಹವಾಗಿದ್ದ ಬೆಳಗಾವಿಯ ಹೀನಾ,ಕಳೆದ ಎಂಟು ತಿಂಗಳ ಹಿಂದೆ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದ ಹೀನಾಕೌಸರ್,ಇಂದು ಕೋರ್ಟ್‌ಗೆ ಹಾಜರಾಗಿ ಮನೆಗೆ ವಾಪಸ್ ಆಗುತ್ತಿದ್ದ ಹೀನಾ ಕೌಸರ್ ಮೇಲೆ ಅಟ್ಯಾಕ್ ಮಾಡಿದ ಪತಿ ಮಂಜೂರ್ ತನ್ನ ಪತ್ನಿಯ ಮರ್ಡರ್ ಮಾಡಿದ್ದಾನೆ.

ಈ ವೇಳೆ ಕೋಟೆ ಕೆರೆ ಬಳಿ ಜನನಿಬಿಡ ಪ್ರದೇಶದಲ್ಲಿ ಮಾರಣಾಂತಿಕ ಹಲ್ಲೆ ನಡೆದಿದೆ.ಸ್ಥಳಕ್ಕೆ ಮಾರ್ಕೆಟ್ ಠಾಣೆ ಪೊಲೀಸರ ಭೇಟಿ, ಪರಿಶೀಲನೆ ನಡೆಸಿದ್ದಾರೆ.ಸ್ಥಳದಲ್ಲಿ ಜಮಾವಣೆಗೊಂಡ ಜನರ ನಿಯಂತ್ರಿಸಲು ಪೊಲೀಸರ ಹರಸಾಹಸ ಪಟ್ಟಿದ್ದಾರೆ.

Share News

About admin

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *