Breaking News
Featured Video Play Icon

ಮಠಾಧೀಶರ ಬಗ್ಗೆ ಹಗುರವಾಗಿ ಮತನಾಡದಂತೆ ಮುತಾಲಿಕ್ ಗೆ ಎಚ್ಚರಿಕೆ ಅನಿಲ್ ಕುಮಾರ್ ಪಾಟೀಲ್

ಹಲವು ದಿನಗಳಿಂದ ಶ್ರೀರಾಮ ಸೇನೆ ಕಾರ್ಯಕರ್ತರು ಆಜಾನ್ ನೀಡುವ ದ್ವನಿ ವರ್ಧಕಗಳ ತೆರವಿಗೆ ಸೂಚಿಸಿ ವಿರೋಧವಾಗಿ ಭಜನೆ, ಸುಪ್ರಭಾತ ಪಠಿಸುವಂತೆ ನೂರಾರು ದೇವಸ್ಥಾನಗಳಿಗೆ ಧಾರವಾಡ ಜಿಲ್ಲಾದ್ಯಂತ ಮನವಿ ನೀಡುತ್ತಾ ಬಂದಿದ್ದರು, ಆದ್ರೆ ಈ ದಿನ ಸಾರ್ವಜನಿಕರು ಹಾಗೂ ದೇವಸ್ಥಾನ ಕಮಿಟಿ ಅವರು ಅವರಿಗೆ ಹೇಗೆ ರೆಸ್ಪಾನ್ಸ್ ಮಾಡಿದ್ರು ಅಂತ ನೀವೇ ನೋಡಿ

ವಿಫಲವಾಯಿತು ಭಜನೆ, ಸುಪ್ರಭಾತ ಅಭಿಯಾನ ಶ್ರೀರಾಮ ಸೇನೆಗೆ ಮುಖಭಂಗ
ಜಾತ್ಯತೀತ ತತ್ವ ಪಾಲಿಸಲು ಮನವಿ ಮಾಡಿದ ನಾಯಕರು

ಹೌದು ಹಲವು ದಿನಗಳಿಂದ ಶ್ರೀರಾಮಸೇನೆ ಕಾರ್ಯಕರ್ತರು ರಾಜ್ಯಾದ್ಯಂತ ಮಠ, ದೇಗುಲುಗಳಿಗೆ ಭೇಟಿ ನೀಡಿ ಬೆಳಗಿನ ಜಾವ ಒಂದು ಗಂಟೆ ಸುಪ್ರಭಾತ ,ಭಜನೆ ನಡೆಸುವಂತೆ ಮನವಿ ಮಾಡಿದ್ದರು ಈ ದಿನ ಅದಕ್ಕೆ ಮಹೂರ್ತ ಕೂಡ ಇಡಲಾಗಿತ್ತು ಆದ್ರೆ ಈ ದಿನ ಬೆಳಗಿನ ಜಾವ ಆಗುತ್ತಿದ್ದಂತೆ ಒಂದೆರೆಡು ದೇವಸ್ಥಾನಗಳಲ್ಲಿ ಮಾತ್ರ ಸ್ವತಃ ಸಂಘಟಕರು ಹೋಗಿ ಭಜನೆ ಸುಪ್ರಭಾತ ಹಾಕಿದ್ದಾರೆ ಹೊರತು ,ದೇವಸ್ಥಾನ ಕಮಿಟಿ ಆಗಲಿ ಅಥವಾ ಸಾರ್ವಜನಿಕರಾಗಲಿ ಈ ವಿಚಾರಕ್ಕೆ ಬೆಂಬಲ ಸೂಚಿಸಲಿಲ್ಲಾ. ಅಲ್ಲದೆ ಶ್ರೀರಾಮ ಸೇನೆ ಕಾರ್ಯಕರ್ತರ ಈ ಅಭಿಯಾನಕ್ಕೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ವಿರೋಧ ಕೂಡ ವ್ಯಕ್ತವಾಗಿದೆ.

ಹಳೆಹುಬ್ಬಳ್ಳಿ ಗಲಾಟೆಯಲ್ಲಿ ಜಖಂ ಗೊಂಡಿದ್ದ ಹನುಮಾನ್ ದೇವಸ್ಥಾನದಲ್ಲಿ ಇಂದು ಬೆರಳೆಣಿಕೆ ಕಾರ್ಯಕರ್ತರು ಭಜನೆ ಮಾಡಿದ್ದರು ಇದನ್ನು ಹೊರತು ಪಡಿಸಿ,ನೇಕಾರನಗರ ಹಾಗೂ ಧಾರವಾಡದ ಕೆಲವೆಡೆ ಭಜನೆ ಕೇಳಿಬಂದವು ಆದ್ರೆ ನಾಳೆ ದಿನ ಕೂಡ ಇದು ಮುಂದು ವರೆಯಲಿದಿಯಾ ಎನ್ನುವುದು ಪ್ರಶ್ನೆ ಯಾಗಿದೆ.ಇನ್ನು ಶ್ರೀರಾಮ ಸೇನೆಯ ಕಾರ್ಯಕರ್ತರ ಈ ಅಭಿಯಾನ ಸಂಪೂರ್ಣ ವಿಫಲ ಎಂದು ಕಾಂಗ್ರೆಸ್ ನಾಯಕರು ಟೀಕಿಸಿದ್ದಾರೆ

ಮಠಾಧೀಶರ ಬಗ್ಗೆ ಹಗುರವಾಗಿ ಮತನಾಡದಂತೆ ಮುತಾಲಿಕ್ ಗೆ ಎಚ್ಚರಿಕೆ
ಸ್ವಾಮೀಜಿಗಳು ದಾನದಿಂದ ಕಲ್ಯಾಣ ಕಾರ್ಯ ಮಾಡುತ್ತಾರೆ

ಮಂಡ್ಯದಲ್ಲಿ  ಮಠಾಧೀಶರನ್ನ ಟೀಕಿಸಿ ಸ್ವಾಮೀಜಿಗಳು ಭಿಕ್ಷೆ ಬಿಡುತ್ತಾರೆ ಎಂದು  ಹಗುರವಾಗಿ ಮಾತನಾಡಿದ ಪ್ರಮೋದ್ ಮುತಾಲಿಕ್ ಹೇಳಿಕೆ ಬಗ್ಗೆ ಕೂಡ ವೀರಶೈವ ಲಿಂಗಾಯತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ, ಪ್ರಖ್ಯಾತ ಮಠಗಳು ಇಂದಿಗೂ ಕೂಡ ದಾನ ಪಡೆದು  ಧರ್ಮದಿಂದ ಸಾಕಷ್ಟು ಒಳ್ಳೆಯ ಕೆಲಸ ಮಾಡುತ್ತೇವೆ ಈ ರೀತಿಯಾಗಿ ಹೇಳಿಕೆ ನೀಡದಂತೆ ಎಚ್ಚರಿಕೆ ಕೂಡ ನೀಡಿದ್ದಾರೆ

ಒಟ್ಟಾರೆಯಾಗಿ ಧಾರವಾಡ ಜಿಲ್ಲೆಯಾದ್ಯಂತ ಇಂದು ಶ್ರೀರಾಮ ಸೇನೆ ಕಾರ್ಯಕರ್ತರು ಸಾಕಷ್ಟು ಪ್ರಯತ್ನ ಪಟ್ಟರು ಸಾರ್ವಜನಿಕರು ಮಾತ್ರ ಈ ಅಭಿಯಾನಕ್ಕೆ ಉತ್ಸಾಹ ತೋರಿಲ್ಲ ಇನ್ನು ಮತ್ತೊಂದು ಕಡೆ ಅಂಜುಮನ್ ಕಮಿಟಿ ಮೌಲ್ವಿಗಳು ಸಭೆ ಸೇರಿ ಬೆಳಗಿನ ನಮಾಜ್ ಗೆ ಲೌಡ್ ಸ್ಪೀಕರ್ ದ್ವನಿಯನ್ನ ಕಡ್ಡಾಯವಾಗಿ ಕಡಿಮೆ ಮಾಡುವಂತೆ ಮೌಖಿಕವಾಗಿ ತಿಳ್ಸಿದ್ದಾರೆ ಎಂದು ತಿಳಿದು ಬಂದಿದೆ.

Share News

About Shaikh BigTv

Check Also

ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಅಪಹರಿಸಿ ವ್ಯಕ್ತಿ ಹತ್ಯೆ

ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಉಲ್ಬಣಗೊಂಡಿದ್ದು ಮೈತೇಯಿ ಸಮುದಾಯಕ್ಕೆ ಸೇರಿದ ವ್ಯಕ್ತಿಯನ್ನು ಶಂಕಿತ ಕುಕಿ ಸಮುದಾಯದ ಬಂಡುಕೋರರು ಅಪಹರಿಸಿ ಗುಂಡಿಕ್ಕಿ ಹತ್ಯೆ …

Leave a Reply

Your email address will not be published. Required fields are marked *