Breaking News

ಆಂಧ್ರ ಪ್ರದೇಶದಲ್ಲಿ ಸಚಿವರ ಮನೆಗೆ ಬೆಂಕಿ



ಆಂಧ್ರ ಪ್ರದೇಶ:  ಜಿಲ್ಲೆವೊಂದರ ಹೆಸರು ಬದಲಾವಣೆಗೆ ಸಂಬಂಧಿಸಿದಂತೆ ಪ್ರತಿಭಟನಾಕಾರರು ಅಲ್ಲಿನ ಸಾರಿಗೆ ಸಚಿವ ಪಿ ವಿಶ್ವರೂಪು ಅವ್ರ ಮನೆಗೆ ಬೆಂಕಿ ಹಚ್ಚಿದ್ದಾರೆ. ಹೊಸದಾಗಿ ರಚನೆಯಾಗಿರೋ ಕೋನಸೀಮ ಜಿಲ್ಲೆಯನ್ನ ʻಬಿ ಆರ್‌ ಅಂಬೇಡ್ಕರ್‌ ಕೋನಸೀಮʼ ಅಂತ ಬದ್ಲಾಯಿಸೋಕೆ ಪ್ರಸ್ತಾಪಿಸಲಾಗಿತ್ತು.

ಇದನ್ನ ಕೋನಸೀಮ ಸಾಧನಾ ಸಮಿತಿ ವಿರೋಧಿಸಿತ್ತು. ಈ ಸಂಬಂಧ ಅಮಲಾಪುರಂ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಗಿದೆ. ಈ ವೇಳೆ ಸಚಿವರ ಮನೆಗೆ ಬೆಂಕಿ ಹಚ್ಚಲಾಗಿದೆ. ಇನ್ನು ಘಟನೆಯಲ್ಲಿ ಸಚಿವ ಮತ್ತು ಅವ್ರ ಕುಟುಂಬದವ್ರಿಗೆ ಯಾವುದೇ ರೀತಿ ಅಪಾಯವಾಗಿಲ್ಲ ಅಂತ ಹೇಳಲಾಗಿದೆ. ಘಟನೆ ನಡೆದ ಸ್ಥಳದಲ್ಲಿ ಸೆಕ್ಷನ್‌ 144 ಜಾರಿಗೊಳಿಸಲಾಗಿದೆ. ವಿರೋಧ ಪಕ್ಷಗಳು ಈಗ ಆಡಳಿತ ಪಕ್ಷ YSR ಕಾಂಗ್ರೆಸ್‌ನ ಟೀಕಿಸಿದ್ದು, ವಿಷಯದ ಮೇಲೆ ಹಿಡಿತ ಸಾಧಿಸುವಲ್ಲಿ ಪೂರ್ಣವಾಗಿ ವಿಫಲವಾಗಿದೆ ಅಂತ ಹೇಳಿವೆ.

Share News

About BigTv News

Check Also

ವಿಟ್ಲ: 35 ಬಾರಿ ವಾರಂಟ್ ಜಾರಿಯಾಗಿದ್ದ ಆರೋಪಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ

ಕಳೆದ ಒಂಬತ್ತು ವರ್ಷಗಳಿಂದ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ವಿಟ್ಲ …

Leave a Reply

Your email address will not be published. Required fields are marked *