ನವಲಗುಂದ: ತಾಲೂಕಿನ ಗುಡಿಸಾಗರ ಕ್ರಾಸ್ ಬಳಿ ಆಟೋ ಒಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಯಾದ ಘಟನೆ ನಡೆದಿದೆ.
ಓರ್ವ ಸ್ಥಳದಲ್ಲೇ ಮೃತ ಪಟ್ಟಿದ್ದು , ವೃದ್ದೆಗೆ ಗಾಯಗಳಾಗಿವೆ . ಇನ್ನು ಭಕ್ತರು ಯಮನೂರ ಚಾಂಗದೇವ ನ ದರ್ಶನಕ್ಕೆ ಬಂದಿದ್ದರು ಎನ್ನಲಾಗಿದೆ . ದರ್ಶನ ಪಡೆದು ಮರಳಿ ರೋಣ ತಾಲ್ಲೂಕಿನ ತಮ್ಮೂರಿಗೆ ಹೋಗುವ ವೇಳೆ ನವಲಗುಂದ ತಾಲೂಕಿನ ಗುಡಿಸಾಗರ ಕ್ರಾಸ್ ಬಳಿ ದುರ್ಘಟನೆ ಸಂಭವಿಸಿದೆ . ಘಟನೆಯಿಂದ ಚಾಲಕ ಮೌಲಾಸಾಬ್ ರಂಜಾನ್ ಸಾಬ್ ಮುಲ್ಲಾನವರ ಸ್ಥಳದಲ್ಲೇ ಮೃತ ಪಟ್ಟಿದ್ದಾನೆ ಎನ್ನಲಾಗಿದ್ದು , ಬಿಬಿಜಾನ್ ರಂಜಾನ್ ಸಾಬ್ ಮುಲ್ಲಾನವರ ಎಂಬ ವೃದ್ಧೆಗೆ ಗಾಯಗಳಾಗಿದೆ . ಇನ್ನು ಸ್ಥಳಕ್ಕೆ ನವಲಗುಂದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು , ಸಾವು – ನೋವುಗಳ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ .
bigtvnews | Hubli Dharwad News | Kannada News | Karnataka News Hubli News | News In Hubli | Local news

