Breaking News

ಜೆಡಿಎಸ್‌ನ ಕೆಲ ಶಾಸಕರು ನಮ್ಮ ಟಚ್‌ನಲ್ಲಿದ್ದಾರೆ, ಯಾರು ಅಂತಾ ಹೇಳಲ್ಲ : ಸಿದ್ದರಾಮಯ್ಯ


ಕೊಪ್ಪಳ : ಜೆಡಿಎಸ್‌ನ ಕೆಲ ಶಾಸಕರು ನಮ್ಮ ಟಚ್‌ನಲ್ಲಿದ್ದಾರೆ. ಆದರೆ, ಯಾರು ಅಂತಾ ಈಗಲೇ ಹೇಳಲ್ಲ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೊಸ ಬಾಂಬ್‌ ಸಿಡಿಸಿದ್ದಾರೆ. ತಾಲೂಕಿನ ಬಸಾಪುರ ಗ್ರಾಮದ ಬಳಿ ವಿಮಾನ ತಂಗುದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಜೆಡಿಎಸ್‌ ರಾಷ್ಟ್ರೀಯ ಪಕ್ಷ ಅಲ್ಲ.

ಸ್ವಂತವಾಗಿ ಅಧಿಕಾರ ಹಿಡಿಯುವ ಸಾಮರ್ಥ್ಯ ಇಲ್ಲ. ಹಾಗಾಗಿ ಟಚ್‌ನಲ್ಲಿದ್ದಾರೆ ಎಂದರು. ಆದರೆ ಎಷ್ಟುಮಂದಿ ಸಂಪರ್ಕದಲ್ಲಿದ್ದಾರೆ ಮತ್ತು ಅವರು ಯಾರು ಯಾರು ಎಂದು ಮಾತ್ರ ಹೇಳಲಿಲ್ಲ ಎಂದರು. ಕುಮಾರಸ್ವಾಮಿ ಅವರು ಸಿಎಂ ಆಗುವ ಕುರಿತು ಹೇಳಿಕೆ ನೀಡಿದ್ದರೆ ಪಾಪ ಹೇಳಲಿ ಬಿಡಿ ಎಂದರು.

ಇದೇ ವೇಳೆ ‘ಸಿಎಂ ಆಗುತ್ತೇನೆ ಎಂದು ನೀವೂ ಹೇಳಿ’ ಎಂದು ಪತ್ರಕರ್ತರ ಕಾಲೆಳೆದರು. ರಾಜನಾಗುತ್ತೇನೆ ಎಂದು ಹೇಳಿಕೊಳ್ಳಬಹುದು. ಆದರೆ ತೀರ್ಮಾನ ಮಾಡುವುದು ಜನ ಎಂದು ವ್ಯಂಗ್ಯವಾಡಿದರು. ಇನ್ನು ಸಚಿವ ಉಮೇಶ್‌ ಕತ್ತಿ ಅವರು ಪ್ರತ್ಯೇಕ ರಾಜ್ಯ ಹೇಳಿಕೆ ಬಗ್ಗೆ ಪ್ರತ್ರಿಕ್ರಿಯಿಸಿ, ಸಚಿವ ಉಮೇಶ ಕತ್ತಿ ಮೂರ್ಖ. ಕನ್ನಡದ್ರೋಹಿಯಾಗಿರುವುದರಿಂದಲೇ ಈ ರೀತಿಯಾಗಿ ಹೇಳಿಕೆ ನೀಡುತ್ತಿದ್ದಾರೆ. ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಅಂತಾ ಮಾತನಾಡುವುದೇ ದ್ರೋಹದ ಕೆಲಸ. ಅಂಥದ್ದರಲ್ಲಿ ಪ್ರತ್ಯೇಕ ರಾಜ್ಯ ಎಂದು ಮಾತನಾಡಿದರೆ ಹೇಗೆ ಎಂದು ವಾಗ್ದಾಳಿ ನಡೆಸಿದರು. ಏಕೀಕರಣದ ಉದ್ದೇಶ ಕತ್ತಿಗೆ ಗೊತ್ತಿದೆಯೆ ಎಂದು ಕಿಡಿಕಾರಿದರು.

Share News

About BigTv News

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *