ಹುಬ್ಬಳ್ಳಿ: ನಡೆಯಬಾರದಂತ ಘಟನೆ ನಡೆದಿದೆ. ತಾರಿಹಾಳ ಕೈಗಾರಿಕಾ ಪ್ರದೇಶದಲ್ಲಿ ಸ್ಪೋಟ ಆಗಬಾರದಿತ್ತು ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.
ಅವಘಡ ಸ್ಥಳಕ್ಕೆ ಭೇಟಿ ನೀಡಿ ಬಳಿಕ ಮಾತನಾಡಿದ ಅವರು, ಈ ಘಟನೆ ನಡೆಬಾರದಿತ್ತು ನಡೆದಿದೆ. ಈ ಫ್ಯಾಕ್ಟರಿ ಕೇವಲ 15 ದಿನದ ಹಿಂದಷ್ಟೆ ಆರಂಭವಾಗಿದೆ.
ಈ ಫ್ಯಾಕ್ಟರಿ ಅನಧಿಕೃತವಾಗಿದೆ ಯಾರಿಗೂ ತಿಳಿಯದೇ ಆರಂಭ ಮಾಡಲಾಗಿದೆ ಎಂದರು.
ಘಟನೆಯಿಂದ ಫ್ಯಾಕ್ಟರಿ ಮಾಲೀಕ ತಬ್ಸುಮ್ ಶೇಕ್ ಹೆದರಿ ತಲೆ ಮೆರಿಸಿಕೊಂಡಿದ್ದಾನೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ. ಸ್ಥಳೀಯರ ಸಮಯ ಪ್ರಜ್ಞೆಯಿಂದ ದೊಡ್ಡ ಅಪಾಯ ತಪ್ಪಿದೆ. ಹೀಗಾಗಿ ಹಲವರ ಪ್ರಾಣ ಉಳಿದಿದೆ. ಘಟನೆ ಕುರಿತಂತೆ ಪೊಲೀಸ್ ಇಲಾಖೆ ತನಿಖೆ ನಡೆಸುತ್ತಿದೆ ಎಂದು ಅವರು ಹೇಳಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





