ತಾಳಿಕೋಟೆ: ದೇಶದ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಆಗಸ್ಟ್ 5 ರಿಂದ ಆ.12ರವರೆಗೆ 8 ದಿನಗಳ ಕಾಲ ನಿತ್ಯ 10 ಕಿ.ಮೀ.ನಂತೆ ಒಟ್ಟು 75 ಕಿ.ಮೀ. ಆಲಮಟ್ಟಿಯಿಂದ ತಾಳಿಕೋಟೆವರೆಗೆ ‘ಯುವಜನರ ಸಂಕಲ್ಪ ನಡಿಗೆ’ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ, ಶಾಸಕ ಎ.ಎಸ್..ಪಾಟೀಲ ನಡಹಳ್ಳಿ ಹೇಳಿದರು.
ಪಟ್ಟಣ ನಡೆದ ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತರಾಧ್ಯ ಶಿವಾಚಾರ್ಯರ ದ್ವಾದಶ ಪೀಠಾರೋಹಣ ಮಹೋತ್ಸವ ಹಾಗೂ ಜನ್ಮ ಸುವರ್ಣ ಮಹೋತ್ಸವ ಅಂಗವಾಗಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಅ.5 ರಂದು ಆಲಮಟ್ಟಿಯ ಹರ್ಡೇಕರ್ ಮಂಜಪ್ಪನವರ ಸ್ಮಾರಕದಲ್ಲಿ ಪಾದಯಾತ್ರೆಗೆ ಚಾಲನೆ ನೀಡಲಾಗುತ್ತದೆ. ಮಾರ್ಗ ಮಧ್ಯೆ ಅಲ್ಲಲ್ಲಿ ದೇಶಕ್ಕಾಗಿ ಅರ್ಪಣೆಗೈದವರ ಸ್ಮರಣೆ ನಡೆಯುತ್ತದೆ. ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ಯುವಜನರಿಗೆ ಬಿಳಿ ಸಮವಸ್ತ್ರ, ತ್ರಿವರ್ಣ ಮಾದರಿಯ ಟೋಪಿ, ರಾಷ್ಟ್ರಧ್ವಜ ನೀಡಲಾಗುತ್ತದೆ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





