Breaking News

ಜನ ಸೇರಿಸಿದ ತಕ್ಷಣ ಬಿಜೆಪಿಯವರಿಗೆ ಯಾಕೆ ನಡುಕ ಹುಟ್ಟುತ್ತೆ: ಸಚಿವ ಬಿಸಿಪಿ ಪ್ರಶ್ನೆ

ಗದಗ: ಸಿದ್ಧರಾಮೋತ್ಸವ ವಿಚಾರವಾಗಿ ಗದಗನಲ್ಲಿ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ್ ಪ್ರತಿಕ್ರಿಯಿಸಿ ಇದು ಸಿದ್ದರಾಮೋತ್ಸವ ಮಾಡುವಂತಹ ಟೈಮ್ ಅಲ್ಲ. ರಾಜ್ಯ ಮಳೆಯಲ್ಲಿ ತತ್ತರಿಸಿ ಹೋದಂತಹ ಸಮಯ. ರೈತರು ಕಷ್ಟದಲ್ಲಿ ಸಿಲುಕಿದಂತಹ ಸಮಯದಲ್ಲಿ ಸಿದ್ದರಾಮೋತ್ಸವ, ಶಿವಕುಮಾರೋತ್ಸವ ಮಾಡುವಂತಹ ಸಮಯ ಅಲ್ಲ. ಆದ್ರೆ ನಾವು ರೈತರ ಬಗ್ಗೆ ಚಿಂತನೆ ಮಾಡ್ತೇವೆ ಎಂದರು.
ಸಿದ್ದರಾಮೋತ್ಸವದಲ್ಲಿ ಜನರನ್ನು ನೋಡಿ ಬಿಜೆಪಿಯವರಿಗೆ ನಡುಕ ಹುಟ್ಟಿದೆ ಅಂತಾ ಕಾಂಗ್ರೆಸ್ ನವರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ಅವರಿಗೆ ಅದನ್ನ ಬಿಟ್ಟು ಇನ್ನೇನು ಹೇಳಿಕೊಳ್ಳೋಕಿದೆ. ಕಷ್ಟ ಪಟ್ಟು ಅತ್ತು ಕರೆದು ಜೌತಣಕ್ಕೆ ಕರೆಸಿಕೊಂಡ್ರು ಅದೆಂಗೆ ರಾಜ್ಯಾದ್ಯಂತ ಜನರನ್ನು ಕರಕೊಂಡು ಬಂದು ಸೇರಿಸಿಕೊಂಡ್ರು?
ದುಡ್ಡು ಖರ್ಚು ಮಾಡಿ ಎಲ್ಲೆಲ್ಲಿಂದ ತಂದು ಜನ ಸೇರಿಸಿದ್ದಾರೆ. ಜನ ಸೇರಿಸಿದ ತಕ್ಷಣ ಬಿಜೆಪಿಯವರಿಗೆ ಯಾಕೆ ಭಯ ಹುಟ್ಟತ್ತೆ ಎಂದರು.

ಕಾಂಗ್ರೆಸ್ ನವರಿಗೆ ಕೆಲಸ ಇಲ್ಲ, ಮಾಡಿದ ಕಾರ್ಯಕ್ರಮಗಳು ಹೇಳಿಕೊಳ್ಳಲಿಕ್ಕೆ ಮುಂದೇನೂ ಇಲ್ಲ. ನಮಗೆ ನಾವು ಮಾಡಿದಂತಹ ಕಾರ್ಯಕ್ರಮಗಳು ಇದ್ದಾವೆ. ಆ ಕಾರ್ಯಕ್ರಮಗಳನ್ನು ಇಟ್ಟುಕೊಂಡು ಜನರ ಮುಂದೆ ಹೋಗ್ತೇವೆ. ಜನ ನಮಗೆ ಆಶೀರ್ವಾದ ಮಾಡ್ತಾರೆ. ಡಿಕೆಶಿ ಸಿದ್ದರಾಮಯ್ಯ ಪರಸ್ಪರ ಹೇಗಿದ್ದಾರೆ ಅನ್ನೋ ವಿಚಾರಕ್ಕೆ ರಾಹುಲ್ ಗಾಂಧಿ ಆಲಿಂಗನ ಮಾಡಿಸಿದ್ದಾರೆ. ಇದೇ ವಿಚಾರವಾಗಿ ನೆನ್ನೆ ಅಶೋಕ ಅವರು ದೃತರಾಷ್ಟ್ರ ಆಲಿಂಗನ ಅಂತಾ ಹೇಳಿದ್ದಾರೆ ಎಂದು ವ್ಯಂಗ್ಯವಾಡಿದರು.

Share News

About BigTv News

Check Also

ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಅಪಹರಿಸಿ ವ್ಯಕ್ತಿ ಹತ್ಯೆ

ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಉಲ್ಬಣಗೊಂಡಿದ್ದು ಮೈತೇಯಿ ಸಮುದಾಯಕ್ಕೆ ಸೇರಿದ ವ್ಯಕ್ತಿಯನ್ನು ಶಂಕಿತ ಕುಕಿ ಸಮುದಾಯದ ಬಂಡುಕೋರರು ಅಪಹರಿಸಿ ಗುಂಡಿಕ್ಕಿ ಹತ್ಯೆ …

Leave a Reply

Your email address will not be published. Required fields are marked *