Breaking News

75ನೇ ಸ್ವಾತಂತ್ರ್ಯ ದಿನಾಚರಣೆ ವಿಭಿನ್ನ ಆಚರಣೆ


ಸ್ವಾತಂತ್ರ್ಯ ದಿನಾಚರಣೆ ಅಮೃತ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿರುವ, ‘ಹರ್ ಘರ್ ತಿರಂಗಾ’ ಅಭಿಯಾನ ಭರ್ಜರಿಯಾಗಿ ನಡೆದಿದೆ. ದೇಶಕ್ಕಾಗಿ ತಮ್ಮ ಹೃದಯದಲ್ಲಿ ಇರುವ ಪ್ರೀತಿ-ಭಕ್ತಿಯನ್ನ ಜನರು ತಮ್ಮ ತಮ್ಮದೇ ಆದ ರೀತಿಯಲ್ಲಿ ವ್ಯಕ್ತ ಪಡಿಸುತ್ತಿದ್ದಾರೆ.

ಆದರೆ ಇಲ್ಲೊಬ್ಬ ತಮಿಳುನಾಡಿನ ವ್ಯಕ್ತಿ ಇದ್ದಾನೆ ನೋಡಿ, ದೇಶದ ಪ್ರತೀಕ ಆತನ ಹೃದಯಲ್ಲಿರುವ ಪ್ರೀತಿ ಎಂಥಹದ್ದು ಅಂತ ತೋರಿಸುವುದಕ್ಕೆ ತನ್ನ ಬಲ ಕಣ್ಣಿನ ಐರಿಸ್ ಬಳಿ ತ್ರಿವರ್ಣ ಧ್ವಜದ ಚಿತ್ರವನ್ನ ಬಿಡಿಸಿಕೊಂಡಿದ್ದಾನೆ.

ಕಣ್ಣಿನ ಗುಡ್ಡೆಯ ಮೇಲೆ ಚಿತ್ರ ಬಿಡಿಸಿಕೊಳ್ಳುವುದು ಅಂದರೆ ಸಾಮಾನ್ಯಾನಾ? ಆದರೂ ಆತ ಆ ಸಾಹಸಕ್ಕೆ ಮುಂದಾಗಿದ್ದ. ಇನ್ನೂ ಆ ಚಿತ್ರ ಬಿಡಿಸಿಕೊಂಡಿದ್ದು ಹೇಗೆ ಅಂತ ಗೊತ್ತಾದ್ರೆ ನೀವು ಇನ್ನೂ ಶಾಕ್ ಆಗ್ತಿರಾ? ಅಸಲಿಗೆ ಕೋಯಂಬತ್ತೂರ್ ಜಲಿಯ ಬಳಿ ಇರುವ ಕುನಯಿಮುಥೂರ್ ಎಂಬಲ್ಲಿ ಸಾಮಾಜಿಕ ಕಾರ್ಯಕರ್ತನಾಗಿ ಗುರುತಿಸುವ ಈ ವ್ಯಕ್ತಿಯ ಹೆಸರು ರಾಜಾ ಎಂದು ಹೇಳಲಾಗುತ್ತಿದೆ. ಈತ ಚಿತ್ರ ಕಲಾವಿದ ಕೂಡ. ಹೀಗೆ ಕಣ್ಣಿನಲ್ಲಿ ಚಿತ್ರ ಬಿಡಿಸಿಕೊಳ್ಳುವುದಕ್ಕೆ ಇನ್ನೊರ್ವ ಚಿತ್ರಕಲಾವಿದ ಸಹಾಯ ಪಡೆದುಕೊಂಡಿದ್ದಾನೆ.

Share News

About BigTv News

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *