ಹುಬ್ಬಳ್ಳಿ : ಹು-ಧಾ ಪಾಲಿಕೆಯಿಂದ ರಾಷ್ಟ್ರ ಧ್ವಜಗಳನ್ನು ಸ್ವೀಕಾರ ಮಾಡುವ ಮೊದಲು ಪರಿಶೀಲನೆ ಮಾಡಬೇಕು . ಲೋಪವಾದ ಧ್ವಜಗಳನ್ನ ಪರಿಶೀಲನೆ ಮಾಡದೇ ಸ್ವೀಕಾರ ಮಾಡಲಾಗಿದೆ. ಲೋಪ ಎಸಗಿರುವವರ ವಿರುದ್ಧ ಕಟ್ಟು ನಿಟ್ಟಿನ ಕ್ರಮಕೈಗೊಳ್ಳಬೇಕು ಎಂದು ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಿದ್ದೇನೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಮಹಾನಗರ ಪಾಲಿಕೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸಿಎಂ ಬದಲಾವಣೆ ಕುರಿತಂತೆ ಯಾವುದೇ ಪ್ರಶ್ನೆ ಇಲ್ಲ. ಅಧಿಕಾರ ವಲಯದಲ್ಲಿ ಅಸ್ತಿರತೆ ಕಾಪಾಡಬೇಕು. ಸಿಎಂ ವಿಚಾರದಲ್ಲಿ ಜಗದೀಶ ಶೆಟ್ಟರ್ ಹೆಸರು ಯಾರು ಮುನ್ನೆಲೆಗೆ ತಂದಿದ್ದಾರೆ ಗೊತ್ತಿಲ್ಲ. ಈ ಬಗ್ಗೆ ರಾಷ್ರ್ಟ್ರೀಯ ನಾಯಕತ್ವದಲ್ಲಿಯೂ ಯಾವುದೇ ಚರ್ಚೆ ಇಲ್ಲ ಎಂದರು.
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗಾಗಿ ಹಿಂದೂ ಸಂಘಟನೆಗಳ ಹೋರಾಟ ವಿಚಾರಕ್ಕೆ ಪ್ರತಿಕ್ರಿಯಿಸಿ, ಈದ್ಗಾ ಮೈದಾನ ಪಾಲಿಕೆ ವ್ಯಾಪ್ತಿಯಲ್ಲಿದೆ. ಈ ವಿಚಾರದಲ್ಲಿ ಪಾಲಿಕೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಸ್ವತಂತ್ರ ಅಧಿಕಾರ ಇದೆ. ಇದರ ಬಗ್ಗೆ ಅವರು ಏನು ನಿರ್ಧಾರ ತೆಗೆದುಕೊಳ್ಳುತ್ತಾರೋ ಅವರಿಗೆ ಬಿಟ್ಟ ವಿಚಾರ. ಧಾರ್ಮಿಕ ಆಚರಣೆ ವಿಚಾರವಾಗಿ ಸುಪ್ರೀಂಕೋರ್ಟ್ ನಿಂದಲೇ ಆದೇಶವಿದೆ. ಹೀಗಾಗಿ ಪಾಲಿಕೆ ಅಧಿಕಾರಿಗಳು ಈ ಬಗ್ಗೆ ನಿರ್ಧಾರ ಕೈಗೊಳ್ಳುತ್ತಾರೆ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





