ಕರ್ನಾಟಕದ ಅವಿಭಾಜ್ಯ ಅಂಗ ಬೆಳಗಾವಿ ತನಗೆ ಸೇರಬೇಕೆಂದು ಪಕ್ಕದ ಮಹಾರಾಷ್ಟ್ರ ಪದೇ ಪದೇ ವಿವಾದ ಹೊತ್ತಿಸಿದ್ದು ಇನ್ನೂ ಮಾಸಿಲ್ಲ. ಈ ಮುನ್ನವೇ ರಾಯಚೂರು ಜಿಲ್ಲೆ ತೆಲಂಗಾಣಕ್ಕೆ ಸೇರಬೇಕೆಂದು ಹೇಳುವ ಮೂಲಕ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ವಿವಾದದ ಕಿಡಿ ಹೊತ್ತಿಸಿದ್ದಾರೆ.
ಟಿಆರ್‌ಎಸ್ ಸರ್ಕಾರದ ಕಲ್ಯಾಣ ಯೋಜನೆಗಳಿಂದ ಆಕರ್ಷಿತರಾಗಿರುವ ಕರ್ನಾಟಕದ ರಾಯಚೂರು ಜಿಲ್ಲೆಯ ಜನರು ತಮ್ಮ ಪ್ರದೇಶವನ್ನು ತೆಲಂಗಾಣಕ್ಕೆ ವಿಲೀನಗೊಳಿಸಬೇಕೆಂದು ಒತ್ತಾಯಿಸುತ್ತಿದ್ದಾರೆ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಹೇಳಿದ್ದಾರೆ. ಅವರ ಹೇಳಿಕೆಗೆ ಕರ್ನಾಟಕದಲ್ಲಿ ಭಾರೀ ವಿರೋಧ ಹುಟ್ಟಿಸುತ್ತಿದೆ.
ಟಿಆರ್‌ಎಸ್ ಅಧಿಕಾರಕ್ಕೆ ಬಂದ ನಂತರ 2016 ರಲ್ಲಿ ರೂಪುಗೊಂಡ ನೈರುತ್ಯ ತೆಲಂಗಾಣದ ಹೊಸ ಜಿಲ್ಲೆಯಾದ ವಿಕಾರಾಬಾದ್‌ನಲ್ಲಿ ಹೊಸ ಕಲೆಕ್ಟರೇಟ್ ಸಂಕೀರ್ಣವನ್ನು ರಾವ್ ಮಂಗಳವಾರ ಉದ್ಘಾಟಿಸಿದ ಸಂದರ್ಭದಲ್ಲಿ ಈ ವಿವಾದ ಹುಟ್ಟಿಸಿದ್ದಾರೆ ಎನ್ನಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

