Breaking News

ವಂದೇ ಭಾರತ ರೈಲು ಆರಂಭವಾಗಿದೆ. ವಿಮಾನದಲ್ಲಿ ಹೋದ ಅನುಭವ ಆಗುತ್ತದೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ

ಹುಬ್ಬಳ್ಳಿ : ದಕ್ಷಿಣ ಮತ್ತು ಉತ್ತರ ಭಾರತದ ನಡುವೆ ಸಂಪರ್ಕ ಕಲ್ಪಿಸುವ ಮೊದಲ ವಂದೇ ಭಾರತ ರೈಲು ಇದಾಗಿದೆ. ಈ ರೈಲು ಆರಂಭಿಸುವಂತೆ ಬಹುದಿನಗಳ ಬೇಡಿಕೆ ಇತ್ತು ಏಪ್ರಿಲ್ ನಲ್ಲಿ ಆರಂಭಿಸಬೇಕಾಗಿತ್ತು. ಸ್ವಲ್ಪ ತಡವಾದ್ರೂ, ಈಗ ಆರಂಭವಾಗಿದೆ. ಸ್ವದೇಶಿ ನಿರ್ಮಿತ ಟ್ರೈನ್ ಇದು ಅನ್ನೋದು ಹೆಮ್ಮೆ ವಿಚಾರ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಧಾರವಾಡದಿಂದ ಪ್ರಯಾಣದ ವೇಳೆ ಮಾಧ್ಯಮದ ಜೊತೆಗೆ ಮಾತನಾಡಿ, ವಿದೇಶಗಳಲ್ಲಿ ಇಂತಹ ಟ್ರೈನ್ ನೋಡುತ್ತಿದ್ದೆವು. ಮೋದಿ ಅವರ ಪ್ರಯತ್ನದ ಫಲವಾಗಿ ಈ
ರೈಲು ಆರಂಭವಾಗಿದೆ. ವಿಮಾನದಲ್ಲಿ ಹೋದ ಅನುಭವ ಆಗುತ್ತದೆ.ಸದ್ಯ ಇದರ ಸಮಯ ಹೆಚ್ಚಿದೆ. ಮುಂದಿನ ದಿನಗಳಲ್ಲಿ ಇದರ ವೇಗ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ತುಮಕೂರು ಮತ್ತು ಚಿತ್ರದುರ್ಗ ನಡುವಿನ ರೈಲ್ವೆ ಲೈನ್‌ಗೆ ಭೂಸ್ವಾಧೀನ ಮಾಡಬೇಕಿದೆ. ರಾಜ್ಯ ಸರ್ಕಾರ ಮುತುವರ್ಜಿ ವಹಿಸಬೇಕಿದೆ. ಭೂಸ್ವಾಧೀನ ಮಾಡಿಕೊಟ್ಟಲ್ಲಿ ರೈಲ್ವೆ ಲೈನ್ ಕಾಮಗಾರಿ ಆರಂಭವಾಗಲಿದೆ. ಹುಬ್ಬಳ್ಳಿ – ಬೆಂಗಳೂರು ನಡುವೆ ಅಂತರ ಕಡಿಮೆಯಾಗಲಿದೆ. ಧಾರವಾಡ – ಬೆಂಗಳೂರು ನಡುವೆ ಆರಂಭಗೊಳ್ಳುವ ಸಮಯದ ಬಗ್ಗೆ ಜನರ ಆಕ್ಷೇಪವಿದೆ. ಬೆಳಿಗ್ಗೆ ಧಾರವಾಡದಿಂದ ವಂದೇ ಭಾರತ ಆರಂಭಿಸಲು ಕ್ರಮ ಜರುಗಿಸುವ ಬಗ್ಗೆ ಮಾಹಿತಿ ನೀಡಿದರು.

Share News

About BigTv News

Check Also

ಹುಬ್ಬಳ್ಳಿಗೆ ನೂತನ ಕಮಿಷನರ್ ಎಂಟ್ರಿ! ಇಂದು ಮಧ್ಯಾಹ್ನ 2 ಗಂಟೆಯೊಳಗೆ ಭೂಷಣ್ ಬೋರ್ಸೆ ಆಗಮನ..

ನಿನ್ನೆ ಸುದ್ದಿ… ಇಂದು ಕಮಿಷನರ್ ಎಂಟ್ರಿ! ಅವಳಿ ನಗರದ ಖಾಕಿಗೆ ಭೂಷಣ್ ಬೋರ್ಸೆ ಸಾರಥ್ಯ.. ನಿನ್ನೆ ಬ್ರೇಕ್ ಮಾಡಿದ ಸುದ್ದಿ …

Leave a Reply

Your email address will not be published. Required fields are marked *