ಬೆಂಗಳೂರು: ‘ಕೇಂದ್ರದ ಬಿಜೆಪಿ ಸರ್ಕಾರ ಮತ್ತು ರಾಜ್ಯ ಬಿಜೆಪಿ ಸರ್ಕಾರ ಒಂದು ದೇಶ ಒಂದು ಭಾಷೆ ಮೂಲಕ ಸಂಚು ರೂಪಿಸಿ ಕನ್ನಡವನ್ನು ನಿರ್ಲಕ್ಷಿಸಿವೆ. ಇದು ಕ್ಷಮಾರ್ಹ ಹಾಗೂ ಖಂಡನಾರ್ಹ’ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಟ್ವೀಟ್‌ನಲ್ಲಿ ಕಿಡಿ ಕಾರಿದ್ದಾರೆ.
ಭಾರತ ಅಮೃತ ಮಹೋತ್ಸವ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗೆ ‘ಒಂದು ಭಾರತ- ಶ್ರೇಷ್ಠ ಭಾರತ’ ಪ್ರವಾಸ ಕಾರ್ಯಕ್ರಮ ಆಯೋಜಿಸಲಾಗಿದೆ. ಅದರಲ್ಲಿ ಕೇವಲ ಹಿಂದಿ ಮಾತನಾಡುವ ಹಿಂದಿ ಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡು ಹೊರ ರಾಜ್ಯಗಳಿಗೆ ಪ್ರವಾಸಕ್ಕೆ ಕಳುಹಿಸಲಾಗುತ್ತಿದೆ. ಈ ಬಗ್ಗೆ ಮಾಧ್ಯಮಗಳ ವರದಿ ನೋಡಿ ನಾನು ಗಾಬರಿಯಾಗಿದ್ದೇನೆ. ಬೆಂಗಳೂರು ಡಿಡಿಪಿಐ ಹೊರಡಿಸಿರುವ ಆದೇಶ ಕನ್ನಡವನ್ನು ಕಗ್ಗೊಲೆ ಮಾಡುವ ಆದೇಶ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





