Breaking News

ಬಸ್ಸ ನಿರ್ವಾಹಕಿಯಿಂದ ವೃದ್ಧೆಯ ಕಪಾಳಕ್ಕೆ ಹೊಡೆತ

ಹುಬ್ಬಳ್ಳಿ : ಕುಂದಗೋಳ ದಿಂದ ಹುಬ್ಬಳ್ಳಿಗೆ ಬರುತ್ತಿದ್ದ ಸರ್ಕಾರಿ ಬಸ್‌ನಲ್ಲಿದ್ದ ನಿರ್ವಾಹಕಿಯೊಬ್ಬರು ವೃದ್ಧೆಯ ಮೇಲೆ ಹಲ್ಲೆ ನಡೆಸಿರುವ ಘಟನೆ ಇಂದು ಬೆಳಗಿನ ಜಾವ ನಡೆದಿದೆ ನಿರ್ವಾಹಕಿಯ ವರ್ತನೆಗೆ ಇದೀಗ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂದು ಬೆಳ್ಳಿಗ್ಗೆ 7 ಗಂಟೆಗೆ ಕುಂದಗೋಳ ದಿಂದ ಹುಬ್ಬಳ್ಳಿಯತ್ತ ಬರುತ್ತಿದ್ದ ಮಾರ್ಗ ಮಧ್ಯ ಶರೇವಾಡ ಬಳಿ ನಿರ್ವಾಹಕಿ ವೃದ್ಧ ಮಹಿಳೆಯ ಜೊತೆ ಜಗಳ ಪ್ರಾರಂಭವಾಗಿದೆ. ತದನಂತರದಲ್ಲಿ ಜಗಳ ಅತಿರೇಕಕ್ಕೆ ಹೋಗುತ್ತಿದ್ದ ಹಾಗೆ ನಿರ್ವಾಹಕಿ ವೃದ್ಧೆ ಎಂಬುದನ್ನು ಗಮನಿಸದೆ ಕಪಾಳ ಮೋಕ್ಷವನ್ನು ಮಾಡಿದ್ದಾರೆ. ಇದನ್ನು ನೋಡುತ್ತಿದ್ದ ಸಹ ಪ್ರಯಾಣಿಕರು ತಮ್ಮ ಮೊಬೈಲ್‌ನಲ್ಲಿ ಈ ವಿಡಿಯೋ ಸೆರೆ ಹಿಡಿದಿದ್ದಾರೆ.

ವೃದ್ಧೆ ಎಂಬುದನ್ನು ನೋಡದೇ ಪ್ರಯಾಣಿಕರ ಸಮ್ಮುಖದಲ್ಲಿಯೇ ಕಪಾಳ ಮೋಕ್ಷ ಮಾಡಿದ ನಿರ್ವಾಹಕಿಯ ಮೇಲೆ ಹಿರಿಯ ಸಾರಿಗೆ ಇಲಾಖೆಯ ಅಧಿಕಾರಿಗಳು ಯಾವ ರೀತಿಯಾದ ಕ್ರಮವನ್ನು ಜರಗಿಸುತ್ತಾರೆ ಎಂಬುದನ್ನು ಇದೀಗ ಕಾದು ನೋಡಬೇಕಿದೆ.

Share News

About BigTv News

Check Also

ಹುಬ್ಬಳ್ಳಿ–ಧಾರವಾಡದಲ್ಲಿ ಪಡಿತರ ಅಕ್ಕಿ ಅಕ್ರಮ ದಂಧೆ ಆರೋಪ..!ಆಹಾರ ಇಲಾಖೆ–ಪೊಲೀಸ್ ಇಲಾಖೆ ಕಣ್ಣುಮುಚ್ಚಿ ಕುಳಿತಿದೆಯಾ..?

ಬಡವರ ಪಡಿತರ ಅಕ್ಕಿಗೆ ಕಳ್ಳರ ಕಣ್ಣು..!ಹುಬ್ಬಳ್ಳಿ–ಧಾರವಾಡದಲ್ಲಿ ಅಕ್ರಮ ಸಾಗಾಟದ ಹಾವಳಿ ಆರೋಪ..! ಪಡಿತರ ಅಕ್ಕಿ ಎಲ್ಲಿ ಹೋಗುತ್ತಿದೆ..?ಹುಬ್ಬಳ್ಳಿ–ಧಾರವಾಡದಲ್ಲಿ ಅಕ್ರಮ ದಂಧೆ …

Leave a Reply

Your email address will not be published. Required fields are marked *