Breaking News

ಪೋಲೀಸರಿಂದ ಮಹಿಳೆಯರಿಗೆ ಜಾಗ್ರತಿ ಕಾರ್ಯಕ್ರಮ

ಧಾರವಾಡ ನಗರದ ನಾರಾಯಣಪುರ ಉದ್ಯಾನವನ ದಲ್ಲಿ ಸಬರಬನ್ ಪೋಲೀಸರಿಂದ ಮಹಿಳೆಯರಿಗೆ ಜಾಗ್ರತಿ ಕಾರ್ಯಕ್ರಮ ಜರಗಿತು, ಎಲ್ ಕೆ ಕೋಡಬಾಳ ಸಬರಬನ್ ಪಿ ಎಸ್ ಐ ಮಾತನಾಡಿ ಅಗುಂತಕರಿಗೆ ಬಾಗಿಲು ತೆರೆಯಬೇಡಿ, ಚಿನ್ನ ಶುದ್ದಿಕರಣ ನೆಪಮಾಡಿ ನಿಮ್ಮ ಗಮನ ಬೇರೆಡೆ ಸೆಳೆದು ಚಿನ್ನವನ್ನು ದೋಚುತ್ತಾರೆ ,

ಬಸ್ಸಿನಲ್ಲಿ ಪ್ರಯಾಣ ಮಾಡುವಾಗ ನಿಮ್ಮ ಬ್ಲಾಗ ಮುಂದೆ ಇರಲಿ, ಅಕ್ಕ ಪಕ್ಕ ಹೆಗಲಿಗೆ ಹಾಕಿದಲ್ಲಿ ನಿಮಗೆ ತಿಳಿಯದ ಹಾಗೆ ವೆನಟಿ ಬ್ಯಾಗಿನ ಜೀಪ ತೆಗೆದು ಕಳ್ಳರು ತಮ್ಮ ಕೈ ಚಳಕ ತೋರಿಸುತ್ತಾರೆ, ಮನೆಯ ಕಿಟಕಿಯಲ್ಲಿ ಮೋಬೈಲ್, ಬೆಲೆಬಾಳುವ ವಸ್ತುಗಳನ್ನು ಇಡಬೇಡಿ, ಮನೆಯ ಪ್ರತಿ ಖಿಡಕಿಗೂ ಜಾಳಿಗೆ ಹಾಕಿಸಿ, ಬೇರೆ ಉರಿಗೆ ಹೋಗುವಾಗ ಸಮೀಪದ ಪೋಲೀಸಠಾಣೆಗೆ ಮಾಹಿತಿ ನೀಡಿ, ಬೆಳಿಗ್ಗೆ ಹಾಗೂ ಸಾಯಂಕಾಲ ಹೆಣ್ಣುಮಕ್ಕಳು ವಾಯುವಿಹಾರಕ್ಕೆ ಹೋಗುವಾಗ ನಾಲ್ಕುಜನರ ಗುಂಪು ಇರಲಿ , ಚಿನ್ನ ಹೋರಗಡೆ ಕಾಣುವ ಹಾಗೆ ಬಟ್ಟೆಯ ಮೇಲೆ ಧರಸದಿರಿ ಎಂದರು, ಸ್ಥಿತಿವಂತರು ಸಿ ಸಿ ಟಿವಿ ಅಳವಡಿಸಿಕೊಳ್ಳಲು ಸಲಹೆ ನನೀಡಿದರು ಎ ಎಸ್ ಐ ಕರಿಯಪ್ಪಗೌಡರ ಎಸ್ ಕೆ , ಮಾತನಾಡಿ ಪೋಲೀಸರಿಂದ ಯಾವುದೆ ಸಹಾಯ ಸಹಕಾರ ಬೇಕಾದಲ್ಲಿ ಸಂಪಕಿ೯ಸಲು ಕೋರಿದರು , ನಾವು ಮತ್ತು ನಮ್ಮ ಹಿರಿಯ ಅಧಿಕಾರಿಗಳು ಸೇವೆ ನೀಡಲು 24×7 ಸದಾ ಸಿದ್ದ ಎಂದರು.ಕಾರ್ಯಕ್ರಮದ ಲ್ಲಿ ನಾರಾಯಣಪುರದ ಮಹಿಳೆಯರು ಉಪಸ್ಥಿತರಿದ್ದರು.

Share News

About BigTv News

Check Also

ಹುಬ್ಬಳ್ಳಿಗೆ ನೂತನ ಕಮಿಷನರ್ ಎಂಟ್ರಿ! ಇಂದು ಮಧ್ಯಾಹ್ನ 2 ಗಂಟೆಯೊಳಗೆ ಭೂಷಣ್ ಬೋರ್ಸೆ ಆಗಮನ..

ನಿನ್ನೆ ಸುದ್ದಿ… ಇಂದು ಕಮಿಷನರ್ ಎಂಟ್ರಿ! ಅವಳಿ ನಗರದ ಖಾಕಿಗೆ ಭೂಷಣ್ ಬೋರ್ಸೆ ಸಾರಥ್ಯ.. ನಿನ್ನೆ ಬ್ರೇಕ್ ಮಾಡಿದ ಸುದ್ದಿ …

Leave a Reply

Your email address will not be published. Required fields are marked *