ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಇಂದು ಮಾತನಾಡಿ ರಾಜ್ಯ ಸರಕಾರ ನೀಡುವ ಅಕ್ಕಿ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದರು.ನಾವು ಕೇಂದ್ರದಿಂದ ಈಗಾಗಲೇ ದೇಶಾದ್ಯಂತ ಐದು ಕೆಜಿ ಅಕ್ಕಿ ಕೊಡ್ತಾ ಇದ್ದೀವಿ,ನಮ್ಮದು ಬಿಟ್ಟು ಕರ್ನಾಟಕ ಸಿ.ಎಂ. ಹತ್ತು ಕೆಜಿ ಅಕ್ಕಿ ಕೊಡ್ತಾರಾ ಮೊದಲು ಸ್ಪಷ್ಟಪಡಿಸಲಿ, ಬಿಜೆಪಿ ಅಧಿಕಾರದಲ್ಲಿ ಇರುವ ರಾಜ್ಯಗಳನ್ನು ಸೇರಿಸಿ ಎಲ್ಲರಿಗೂ ಒಂದೇ ಕಾನೂನು ಇದೆ.
ಬಫರ್ ಸ್ಟಾಕ್‌ನ್ನು ನಾವು ಇಟ್ಟುಕೊಳ್ಳಬೇಕಾಗುತ್ತೆ. ಕೇಂದ್ರದ ಅಕ್ಕಿ ಬೇಕಿದ್ರೆ ನಮ್ಮನ್ನು ಕೇಳಿಯೇ ಘೋಷಣೆ ಮಾಡ್ಬೇಕು , ಕೇಂದ್ರದಿಂದ ನಮಗೆ ಸಾಧ್ಯವಿರುವ ಎಲ್ಲಾ ಸಹಕಾರ ಕೊಡುತ್ತೇವೆ. ಟೆಂಡರ್ ಕರೆದು ಕೇಂದ್ರ ಸರ್ಕಾರ ಅಕ್ಕಿ ಖರೀದಿ ಮಾಡುತ್ತೆ, ನೀವೂ ಅಕ್ಕಿ ಖರೀದಿಸಿ ಜನರಿಗೆ ವಿತರಿಸಿ, ನಮ್ಮದೇನು ಅಭ್ಯಂತರವಿಲ್ಲ. ಎಂದು ಇಂದು ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





