ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ 82 ವಾರ್ಡಗಳಲ್ಲಿ ತಲಾ ಒಂದು ವಾರ್ಡಗೆ ಒಂದು ವಾರ್ಡ ಸಮಿತಿಯನ್ನು ರಚಿಸಲು ಸರ್ಕಾರದ ನಿರ್ದೇಶನದಂತೆ, ಆಸಕ್ತಿಯುಳ್ಳ ಸಾರ್ವಜನಿಕರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಈಗಾಗಲೇ ಅರ್ಜಿಗಳನ್ನು ಸಲ್ಲಿಸಿದ ಸಾರ್ವಜನಿಕರನ್ನು ಹೊರತು ಪಡಿಸಿ ಹೊಸದಾಗಿ ಅರ್ಜಿಗಳನ್ನು ಸಲ್ಲಿಸಬಹುದು.
ಅರ್ಜಿ ಸಲ್ಲಿಸುವವರು ವಾರ್ಡ ಪ್ರತಿನಿಧಿಸುವಂತಹ ಮಹಾನಗರ ಪಾಲಿಕೆಯ ಸದಸ್ಯನು ವಾರ್ಡ ಸಮಿತಿಯ ಅಧ್ಯಕ್ಷನಾಗಿರತಕ್ಕದ್ದು. ಇತರ ಹತ್ತು ಸದಸ್ಯರು ಮಹಾನಗರ ಪಾಲಿಕೆಯಿಂದ ನಾಮ ನಿರ್ದೇಶಿತರಾಗಿರತಕ್ಕದ್ದು, ಅವರ ಪೈಕಿ ಕನಿಷ್ಟ ಇಬ್ಬರು ಸದಸ್ಯರು ಪರಿ಼ಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ಸೇರಿದವರಾಗಿರತಕ್ಕದ್ದು. ಕನಿಷ್ಟ ಮೂರು ಮಂದಿ ಮಹಿಳಾ ಸದಸ್ಯರು ಮತ್ತು ನಿವಾಸಿ ಕ್ಷೇಮಾಭಿವೃದ್ಧಿ ಸಂಘಗಳನ್ನು ಪ್ರತಿನಿಧಿಸುವಂತಹ ಕನಿಷ್ಟ ಇಬ್ಬರು ಸದಸ್ಯರಿದ್ದು, ಅಂತಹ ಸಂಘಗಳು ಯಾವುದೇ ಹೆಸರುಳ್ಳವಾಗಿದ್ದು ಈ ಷರತ್ತುಗಳನ್ನು ಪೂರೈಸಿರತಕ್ಕದ್ದು. ಅದರ ನೋಂದಾಯಿತ ಕಛೇರಿಯು ಆ ವಾರ್ಡಿನ ಭೌಗೋಳಿಕ ವ್ಯಾಪ್ತಿಯಲ್ಲಿರತಕ್ಕದ್ದು. ಅದು ಬಹುತೇಕ ನಿವಾಸಿಗಳು ಅಥವಾ ಪೌರಸಂಬAಧಿ ಗುಂಪು ಅಥವಾ ವಾಣಿಜ್ಯ ಗುಂಪು ಅಥವಾ ಕೈಗಾರಿಕಾ ಗುಂಪುಗಳನ್ನು ಪ್ರತಿನಿಧಿಸುತ್ತಿರತಕ್ಕದ್ದು. ಅದು ಕನಿಷ್ಟ ಮೂರು ವರ್ಷ ಕಾಲ ತನ್ನ ಕಾರ್ಯಚಟುವಟಿಕೆಗಳಲ್ಲಿ ನಿರತವಾಗಿರತಕ್ಕದ್ದು. ಅದು ಯಾವುದೇ ಹೆಸರಿನಿಂದ ನೋಂದಾಯಿಸಲ್ಪಟ್ಟಿದ್ದು, ಧರ್ಮದರ್ಶಿತ್ವದ ಮಟ್ಟದಲ್ಲಿ ಕಾರ್ಯನಿರ್ವಹಿಸುವಂತಹ ವ್ಯಕ್ತಿಗಳನ್ನು ಒಳಗೊಂಡಿರತಕ್ಕದ್ದು. ಮಹಾನಗರ ಪಾಲಿಕೆ ಸದಸ್ಯನಾಗಿ ಆಯ್ಕೆಯಾಗಲು ಅನರ್ಹನಾಗಿರತಕ್ಕ ವ್ಯಕ್ತಿಯು ವಾರ್ಡ ಸಮಿತಿಯ ಸದಸ್ಯನಾಗಿ ನಾಮ ನಿರ್ದೇಶಿತನಾಗತಕ್ಕದ್ದಲ್ಲ (ಮೂರು ಸದಸ್ಯರು), ಅರ್ಜಿ ನಮೂನೆಯನ್ನು ಮಹಾನಗರ ಪಾಲಿಕೆಯ ಎಲ್ಲ ವಲಯ ಕಚೇರಿಗಳಿಂದ, ಪರಿಷತ್ ಕಾರ್ಯದರ್ಶಿ ಕಚೇರಿಯಿಂದ ಕಚೇರಿ ಸಮಯದಲ್ಲಿ ಪಡೆಯತಕ್ಕದ್ದು ಅಥವಾ ಪಾಲಿಕೆಯ website address. hdmc.mrc.gov.in ದಲ್ಲಿ ಇತ್ತಿಚಿನ ಸುದ್ದಿಗಳು ಕಾಲಂನಲ್ಲಿ ಡೌನಲೋಡ ಮಾಡಿಕೊಳ್ಳಬಹುದಾಗಿದೆ.

ಜಾತಿ ಪ್ರಮಾಣ ಪತ್ರ (ಮೀಸಲಾತಿ ಕ್ಲೇಮ್ ಮಾಡಿದ್ದಲ್ಲಿ ತಹಶಿಲ್ದಾರರವರಿಂದ ಪಡೆದ ಪ್ರಮಾಣ ಪತ್ರ ಲಗತ್ತಿಸುವುದು). ಕುಟುಂಬದ ವಾರ್ಷಿಕ ವರಮಾನ (ತಹಶಿಲ್ದಾರರವರಿಂದ ಪಡೆದ ಪ್ರಮಾಣ ಪತ್ರ ಲಗತ್ತಿಸುವದು). ದೈಹಿಕ ನ್ಯೂನತೆ ಹೊಂದಿದ ಬಗ್ಗೆ ಪತ್ರ (ಪ್ರಾಥಮಿಕ ಆರೋಗ್ಯ ಕೇಂದ್ರ ದೃಢೀಕರಣ ಪತ್ರ). ಆರ್‌ಡಬ್ಲೂö್ಯಎ/ಎನ್‌ಜಿಓ ವರ್ಗದಲ್ಲಿ ಮೀಸಲಾತಿ ಕೋರಿದ್ದಲ್ಲಿ ಅಧ್ಯಕ್ಷರು/ಸಂಘ-ಸAಸ್ಥೆಯ ಕಾರ್ಯದರ್ಶಿರವರಿಂದ ಶಿಫಾರಸ್ಸು ಪತ್ರ ಲಗತ್ತಿಸುವದು. ವಿವಿಧ ಕ್ಷೇತ್ರಗಳಲ್ಲಿ ಅನುಭವ ಹೊಂದಿದ ಬಗ್ಗೆ ಪ್ರಶಸ್ತಿ/ಮನ್ನಣೆ ಪಡೆದಿರುವ ಕುರಿತು ಸರ್ಮರ್ಥಿಸುವಂತಹ ದಾಖಲೆಗಳು. ವರ್ಗ ಆಧಾರಿತ ದಾಖಲೆಗಳು (ಆಸಕ್ತಿ/ಅನುಭವ ಹೊಂದಿದ ಕ್ಷೇತ್ರಗಳಿಂದ). ವಾರ್ಡ ಸಮಿತಿ ಸದಸ್ಯನಾಗಿ ಅರ್ಜಿ ಸಲ್ಲಿಸುವವರು ಸಂಬಂಧಪಟ್ಟ ವಾರ್ಡ ವ್ಯಾಪ್ತಿಯಲ್ಲಿ ಮತದಾರನಾಗಿ ನೋಂದಾಯಿತನಾಗಿರತಕ್ಕದ್ದು. ಚುನಾವಣಾ ಗುರುತಿನ ಚೀಟಿಯ ದೃಢೀಕರಣ ಪ್ರತಿ ಲಗತ್ತಿಸಬೇಕು.
ಭರ್ತಿ ಮಾಡಿದ ಅರ್ಜಿಗಳನ್ನು ಆಗಸ್ಟ್ 1 ಸಂಜೆ 5 ಗಂಟೆಯೊಳಗಾಗಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸಂಬAಧಪಟ್ಟ ವಲಯ ಕಚೇರಿಗಳಲ್ಲಿ ಅಥವಾ ಕೇಂದ್ರ ಕಚೇರಿಯಲ್ಲಿರುವ ಸಾರ್ವಜನಿಕ ಸಂಪರ್ಕಾಧಿಕಾರಿ ಕಚೇರಿಯಲ್ಲಿ ಸಲ್ಲಿಸಬಹುದು ಎಂದು ಪಾಲಿಕೆಯ ಸಾರ್ವಜನಿಕ ಸಂಪರ್ಕ ಅಧಿಕಾರಿಗಳು ಪ್ರಕಟಣೆ ತಿಳಿಸಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





