Breaking News

ಮಹಾರಾಷ್ಟ್ರದಲ್ಲಿ ಅಪಘಾತ ಕಲಬುರಗಿಯ 8 ಜನರು ಮೃತ

ಮಹಾರಾಷ್ಟ್ರದಲ್ಲಿ ನಡೆದ ಭೀಕರ ಅಪಘಾತದಿಂದ ಕಲಬುರಗಿಯ ಎಂಟು ಜನರ ದಾರುಣ ಸಾವಾಗಿರುವ ಘಟನೆ ಮಹಾರಾಷ್ಟ್ರದ ಅಕ್ಕಲಕೋಟ ತಾಲ್ಲೂಕಿನ ಶಿರವಾಳ ವಾಡಿಕಲ ಬಳಿ ನಡೆದಿದೆ. ಕ್ರೂಸರ್ ವಾಹನ ಮತ್ತು ಟ್ಯಾಂಕರ್ ನಡುವೆ ನಡೆದ ಅಪಘಾತ ಇದಾಗಿದ್ದು, ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಅಣೂರ ಗ್ರಾಮದ ನಿವಾಸಿಗಳು ಸಾವನ್ನಪ್ಪಿವರು ಎನ್ನಲಾಗಿದೆ. ಮಹಾರಾಷ್ಟ್ರದ ತಿರ್ಥ ಕ್ಷೇತ್ರಗಳಿಗೆ ಪ್ರವಾಸ ತೆರಳಿ ವಾಪಸ್ ಆಗುವಾಗ ಅಪಘಾತ ಸಂಭವಿಸಿದೆ.

ಅಪಘಾತದಿಂದ ಸ್ಥಳದಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿದೆ. ದೇವಸ್ಥಾನಕ್ಕೆ ಹೋಗಿ ಮರಳಿ ಬರುವಾಗ ಈ ದುರ್ಘಟನೆ ಸಂಭವಿಸಿದೆ. ಚಾಲಕನ ಅತಿಯಾದ ವೇಗವೇ ಅಪಘಾತಕ್ಕೆ ಕಾರಣವೆಂದು ಮೇಲ್ನೋಟಕ್ಕೆ ಸಾಭೀತ ಹಾಗಿದೆ ಘಟನೆ ಸಂಭಂದಿಸಿದಂತೆ ಅಳಂದ ಪೋಲಿಸ್‌ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದೆ.

Share News

About BigTv News

Check Also

ಮಾಳಿಗೆಯ ಮೇಲಿದ್ದ ಬಟ್ಟೆ ತೆಗೆಯಲು ಹೋಗಿ ಬಾಲಕಿ ಸಾವು!!

ಪ್ರಿಯದರ್ಶಿನಿ ನಿಂಗಪ್ಪ ಹೊಸಮನಿ ಎಂಬ ಬಾಲಕಿ ಮನೆ‌ಯ ಮಾಳಿಗೆಯ ಮೇಲಿದ್ದ ಬಟ್ಟೆ ತೆಗೆಯಲು ಬಾಲಕಿ ಹೋಗಿದ್ದಾಳೆ.ಮಳೆ-ಗಾಳಿಯ ಆರ್ಭಟ ಹೆಚ್ಚಾಗಿ ನಿಯಂತ್ರಣ …

Leave a Reply

Your email address will not be published. Required fields are marked *