Breaking News

ಸಾಗುವಾನಿ ಮರಗಳ್ಳರನ್ನು ಕಾಯುತ್ತಿದ್ದಾರಾ..? ಅರಣ್ಯ ಇಲಾಖೆಯ ಅಧಿಕಾರಿಗಳು ..?

ಕಲಘಟಗಿ ರೈತನ ಜಮೀನಿನಲ್ಲಿ ಇದ್ದ 60 ಕ್ಕೂ ಹೆಚ್ಚು ಸಾಗುವಾನಿ ಮರಗಳನ್ನು ಪರವಾನಿಗೆ ಪಡೆಯದೆ ಮರಗಳನ್ನು ಕತ್ತರಿಸಿ ಮಾರಾಟ ಮಾಡಲಾಗಿದೆ ಎಂದು ರೈತನೊಬ್ಬರು ಆರೋಪಿಸಿದ್ದಾರೆ. ಕಲಘಟಗಿ ಪಟ್ಟಣದ ರೈತನ ಜಮೀನು [ರಿ.ಸ.ನಂ 275/1 ರಲ್ಲಿ ಬೆಳೆದ ಸಾಗುವಾನಿ ಮರಗಳನ್ನು ಕತ್ತರಿಸಿಲಾಗಿದೆ. ಸುಮಾರ 2 ಎಕರೆ 37 ಗುಂಟೆ ಜಮೀನಿನಲ್ಲಿ ಬೆಳೆದ 150 ಕ್ಕೂ ಹೆಚ್ಚು ಮರಗಳಲ್ಲಿ 60 ಕ್ಕು ಹೆಚ್ಚು ಸಾಗುವಾನಿ ಮರಗಳನ್ನು ಕತ್ತರಿಸಿದ್ದಾರೆ. ಗುಡ್ ನ್ಯೂಸ್ ವೆಲ್ ಪೇರ್ ಸೋಸೈಟಿ ಆಟ್ಸ್ & ಕಾಮರ್ಸ ಫಸ್ಟ ಗ್ರೇಡ್ -1 ಕಾಲೇಜು ಕಲಘಟಗಿ ಹಾಗೂ

ಮೌಂಟ್ ಪೋರ್ಟ ಬ್ರದರ್ಸ ಆಪ್ ಸೇಂಟ್ ಗ್ಯಾಬ್ರಿಲ್ ಗೆ ಸಂಬಂಧಸಿದ ಆಡಳಿತ ಮಂಡಳಿ ಮರಗಳನ್ನು ಕತ್ತರಿಸಿದ್ದಾರೆ ಎಂದು ರೈತ ಆರೋಪಿಸಿದ್ದಾನೆ. ಯಾವುದೇ ಅರಣ್ಯ ಇಲಾಖೆಯ ಪರವಾನಿಗೆ ಪಡೆಯದೆ ಹಾಗೂ ರೈತನ ಪರವಾನಿಗೆ ಪಡೆಯದೆ ಮರಗಳನ್ನು ಕತ್ತರಿಸಲಾಗಿದೆ ಎಂದು ತಿಳಿದು ಬಂದಿದೆ , ಸದ್ಯ ನೊಂದ ರೈತ ನ್ಯಾಯಕ್ಕಾಗಿ ಅರಣ್ಯ ಇಲಾಖೆಗೆ ದೂರ ನೀಡಿದ್ದಾನೆ. ಆದರೆ ಇದುವರೆಗೂ ಅರಣ್ಯ ಇಲಾಖೆ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ.

Share News

About Shaikh BigTv

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *