ಹುಬ್ಬಳ್ಳಿಯಲ್ಲಿನ ಪೋಲಿಸ್ ಠಾಣೆಯ ಜಾಗೆಯನ್ನು ನುಂಗಿಹಾಕಲು ಹಬ್ಬಳ್ಳಿಯ ಭೂಗಳ್ಳರು ಮುಂದಾಗಿದ್ದ, ಘಟನೆ ತಡವಾಗಿ ಬೆಳಕಿಗೆ ಬಂದಿದೆ, ಹೌದು ಹುಬ್ಬಳ್ಳಿಯ ಆನಂದ ನಗರದಲ್ಲಿ ಪೋಲಿಸ್ ಠಾಣೆ ನಿರ್ಮಾಣ ಮಾಡಲು ಪೋಲಿಸ್ ಇಲಾಖೆ ಜಾಗೆಯನ್ನು ಖರೀದಿ ಮಾಡಿಕೊಂಡಿತ್ತು, ಆದರೆ ಪ್ರಭಾವಿ ನಾಯಕರೊಬ್ಬರು ಆ ಜಾಗೆಯನ್ನು ಒತ್ತುವರಿ ಮಾಡಿಕೊಳ್ಳಲು ದಾಖಲೆಗಳನ್ನು ತಯಾರಿ ಮಾಡಿಕೊಳ್ಳುತ್ತೀರುವ ಸಂದರ್ಭದಲ್ಲಿ

ಸಿಕ್ಕಿಹಾಕಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ, ಈ ವಿಷಯ ತಿಳಿಯುತ್ತಿದ್ದಂತೆ ಎಚ್ಚತ್ತುಕೊಂಡ ಹಳೇ ಹುಬ್ಬಳ್ಳಿ ಇನ್ಸಪೆಕ್ಟರ್ ಹಾಗೂ ಸಿಬ್ಬಂದಿಗಳು ಜಾಗೆ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಬಲ್ಲ ಮೂಲಗಳಿಂದ ಮಾಹಿತಿ ಲಬಿಸಿದೆ. ಸದ್ಯ ಸ್ಥಳಕ್ಕೆ ಬೇಟಿ ನೀಡಿದ ಅಧಿಕಾರಿಗಳು ಹಾಗೂ ಪೋಲಿಸ್ ಸಿಬ್ಬಂದಿಗಳು ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲು ಸ್ಥಳಕ್ಕೆಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಒಟ್ಟಿನಲ್ಲಿ ಪೋಲಿಸ್‌ರ ಕಣ್ಣಿಗೆ ಮಣ್ಣು ಎರಚುವ ಕಾರ್ಯ ಹುಬ್ಬಳ್ಳಿಯಲ್ಲಿ ನಡೆದಿದೆ. ಸ್ಥಳೀಯ ರಾಜಕೀಯ ನಾಯಕರ ಕುಮ್ಮಕ್ಕಿನಿಂದ ಈ ರೀತಿಯ ಭೂಗಳ್ಳರು ನಗರದಲ್ಲಿ ಎಚ್ಚುತ್ತಿರುವದು ವಿಪರ್ಯಾಸ…
bigtvnews | Hubli Dharwad News | Kannada News | Karnataka News Hubli News | News In Hubli | Local news

