ಧಾರವಾಡ : ಯುವ ಜನಾಂಗ ವಿಜ್ಞಾನ ಕ್ಷೇತ್ರದ ಸಂಶೋಧನೆಯಲ್ಲಿ ಹೆಚ್ಚು ಹೆಚ್ಚು ತೊಡಗಿಕೊಳ್ಳುವ ಹಾಗೆ ಪ್ರೇರಣೆ ನೀಡಲು ವಿಜ್ಞಾನಿಗಳ ನಾಟಕ “ಪ್ರಭಾಸ್ ” ಮೂಲಕ ಅಭಿನಯ ಭಾರತಿ ನೀಡ್ತಾ ಇರೋದು ಉತ್ತಮ ಕಾರ್ಯ ಎಂದು ಕರ್ನಾಟಕ ವಿಶ್ವ ವಿದ್ಯಾಲಯದ ಉಪಕುಲಪತಿ ಡಾ. ಗುಡಸಿ ಅವರು ಶ್ರಜನಾ ರಂಗ ಮಂದಿರದಲ್ಲಿನ ನಾಟಕ ಪ್ರದರ್ಶನ ವೀಕ್ಷಿಸಿ ಹೇಳಿದರು. ನೋಬಲ್ ಪ್ರಶಸ್ತಿ ವಿಜ್ಞಾನಿ ಮೇಡಂ ಕ್ಯೂರಿ ಅವರ ಸಾಧನೆಯನ್ನು ಗಮನಿಸಿ ಯುವ ಜನಾಂಗ ಪ್ರೇರಣೆ ಪಡೆಯಬೇಕು ಎಂದರು. ಇನ್ನೊರ್ವ ಅತಿಥಿಯಾದ ಡಾ. ವೀರಣ್ಣ ಅವರು ಸಮಯೋಚಿತ ವಾಗಿ ಮಾತನಾಡುತ್ತ ಇಂತಹ ಶೈ ಕ್ಷಣಿಕ್ ಸಾಂಸ್ಕೃತಿಕ ಚಟುವಟಿಕೆಗಳು ಹೆಚ್ಚಾಗಬೇಕು ,ನಾಟಕ ಪ್ರದರ್ಶನ ಮುಖ್ಯವಾದಾಗ, ವೇದಿಕೆ ಮಾತು ಕಡಿಮೆ ಇರಬೇಕು ಅನ್ನುವ ಭಾವ ಎಲ್ಲ ಅತಿಥಿ ಗಳಿಗೆ ಇದ್ದ ಕಾರಣ,ಸಂಕ್ಷಿಪ್ತವಾಗಿ ವೇದಿಕೆಯ ಕಾಯ೯ಕ್ರಮ ಮಾಡಲಾಯಿತು ಅಧ್ಯಕ್ಷ ಅರವಿಂದ ಕುಲಕರ್ಣಿ ವೇದಿಕೆಮೇಲೆ ಉಪಸ್ಥಿತರಿದ್ದರು. ವಿಜ್ಞಾನ, ಪ್ರೇಮ ಮತ್ತು ಜೀವನದ ದೌರ್ಬಲ್ಯಗಳ ಉತ್ತಮ ವಾದ ಮಿಶ್ರಣ ಅಭಿನಯ ಭಾರತಿ ತನ್ನ ಕಲಾವಿದರ ಪ್ರತಿಭೆಗೆ ಮಚ್ಚುಗೆ ವ್ಯಕ್ತ ಪಡಿಸಿದರು.

ಈ ಪ್ರಭಾಸ ನಾಟಕ ಪ್ರದರ್ಶನ ಹಿನ್ನೆಲೆಯಲ್ಲಿ ದುಡಿದ ನಾಗರಾಜ್ ಪಾಟೀಲ್ ಬೆಳಕು ಸಂಯೋಜನೆ ಯೋಗೀಶ್ ಮತ್ತು ಹಿನ್ನೆಲೆ ಪಾಶಾತ್ಯ ಸಂಗೀತ ವನ್ನು ಹೊಸ ಪ್ರತಿಭೆ ವಿಶ್ವಜಿತ್ ಹಂಪಿಹೊಳಿ ಎಲ್ಲರಿಗೂ ಮುಟ್ಟುವಂತೆ ಮಾಡಿ ಫ್ರಾನ್ಸ್, ಪೋಲ್ಯಾಂಡ್ ದೇಶಗಳ ವಾತಾವರಣ ಪರಿಣಾಮಕಾರಿಯಾಗಿ ಮಾಡಿದರು ಎಂದಿನಂತೆ ಸಂತೋಷ ಮಹಾಲೆ ಕೈಚಳಕ ತೋರಿಸಿದರು ಅನುಭವಿ ವಿಜಯೇಂದ್ರ ಅರ್ಚಕ ತಮಗೆ ನೀಡಿದ ನಿರ್ದೇಶನದ,ರಂಗ ನಿರ್ವಹಣೆ,ಸಂಘಟನೆ ಸಹ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸಿದರು ಒಟ್ಟಿನಲ್ಲಿ ಉತ್ತರ ಕರ್ನಾಟಕ ದ ಹವ್ಯಾಸಿ ರಂಗಭೂಮಿಯಲ್ಲಿ ಹೊಸ ಗಾಳಿಯ ಮುನ್ಸೂಚನೆ ಅಭಿನಯ ಭಾರತಿ ಮುಂಚೂಣಿಯಲ್ಲಿ ನಿರ್ವಹಿಸುತ್ತಿರುವುದು ಸಂತೋಷದ ಸಂಗತಿಯಾಗಿದೆ, ಕಾರ್ಯಕ್ರಮ ನಿರ್ವಹಣೆಯನ್ನು ಸಮರ್ಥವಾಗಿ ಸುನಿತಾ ಅರಬಳ್ಳಿ ತಮ್ಮ ಪ್ರಾರ್ಥನೆ ಗೀತೆ ಮತ್ತು ಕಾಣಿಕೆ ನೀಡುವದನ್ನು ಜೇವುರ್ ಜಯತಿರ್ಥ ಸಹಾಯ ದೊಂದಿಗೆ ನಿರ್ವಹಿಸಿದರು.ಸಮೀರ ಜೋಷಿ ವಂದನಾಪ೯ಣೆ ಮಾಡಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





