Breaking News

ಅತಿಯಾದ ವೇಗಕ್ಕೆ ಸಾಕ್ಷಿಯಾಗುತ್ತಿವೆ ಚಿಗರಿ ಬಸ್‌ ನ ಅಫಘಾತಗಳು. ನಿತಯಂತ್ರಣ ತಪ್ಪಿ ಬಸ್‌ಗಳು ಡಿಕ್ಕಿ, ಬಸ್ಸಿನ ಗಾಜು ಪುಡಿ ಪುಡಿ..!

ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ತ್ವರಿತ ಸಾರಿಗೆ ಸೇವೆ ಒದಗಿಸಲು ಬಂದಿರುವ ಚಿಗರಿ ಒಂದಿಲ್ಲೊಂದು ಅವಾಂತರ ಸೃಷ್ಟಿಸುತ್ತಲೇ ಇದೆ. ಈ ನಿಟ್ಟಿನಲ್ಲಿ ನಿಂತಿದ್ದ ಚಿಗರಿ ಬಸ್ ವೊಂದಕ್ಕೆ ಮತ್ತೊಂದು ಚಿಗರಿ ಡಿಕ್ಕಿ ಹೊಡೆದ ಘಟನೆ ಚೆನ್ನಮ್ಮ ವೃತ್ತದ ಬಳಿಯಲ್ಲಿ ನಡೆದಿದೆ. ನಿಂತಿದ್ದ ಚಿಗರಿ ಬಸ್ಸಿಗೆ ಚಿಗರಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬಸ್ಸಿನ ಹಿಂದಿನ ಗಾಜು ಪುಡಿ ಪುಡಿಯಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ಹೈ ಟೆಕ್ ತಂತ್ರಜ್ಞಾನ ಇರುವ ಬಸ್ಸಿನಲ್ಲಿಯೇ ಇಂತಹ ಅಪಘಾತ ಸಂಭವಿಸುತ್ತಿದ್ದರೇ ಇನ್ನೂ ಬೇರೆ ವಾಹನಗಳ ಗತಿ ಏನು ಎಂಬುವುದು ಸಾರ್ವಜನಿಕ ಪ್ರಶ್ನೆಯಾಗಿದೆ. ಇನ್ನೂ ಹುಬ್ಬಳ್ಳಿ ಧಾರವಾಡ ಮಧ್ಯದಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಚಿಗರಿ ಬಸ್ ಅವಾಂತರ ಮಾಡುತ್ತಲೇ ಬಂದಿದ್ದು, ಚಾಲಕನ ಅಜಾಗರೂಕತೆಯೋ ಅಥವಾ ಬ್ರೇಕ್ ಸಮಸ್ಯೆಯೋ ಗೊತ್ತಿಲ್ಲ ಇಂತಹದೊಂದು ಅಪಘಾತ ಸಂಭವಿಸಿದ್ದು, ಈ ಬಗ್ಗೆ ಬಿ.ಆರ್.ಟಿ.ಎಸ್ ಸೂಕ್ತ ಎಚ್ಚರಿಕೆ ವಹಿಸಬೇಕಿದೆ.

Share News

About BigTv News

Check Also

ಹುಬ್ಬಳ್ಳಿ–ಧಾರವಾಡದಲ್ಲಿ ಟ್ರಾಫಿಕ್ ಅರಾಜಕತೆ! ಅಪ್ರಾಪ್ತರ ಕೈಗೆ ಬೈಕ್, ರಸ್ತೆಯಲ್ಲಿ ಜೀವದ ಜೊತೆ ಚೆಲ್ಲಾಟ!

👆News Audio ಹೆಲ್ಮೆಟ್ ಇಲ್ಲ, ನಂಬರ್ ಪ್ಲೇಟ್ ಇಲ್ಲ… ಟ್ರಾಫಿಕ್ ಪೊಲೀಸರ ಕಣ್ಣೆದುರೇ ನಿಯಮಗಳ ಉಲ್ಲಂಘನೆ! ಸಾರ್ವಜನಿಕರ ಜೀವಕ್ಕೆ ಹೊಣೆ …

Leave a Reply

Your email address will not be published. Required fields are marked *