ಬೆಂಗಳೂರು: ರಾಷ್ಟ್ರೀಯ ಮಟ್ಟದ ಮಹಾಘಟ್ ಬಂಧನ್ ನಾಯಕರು ಸೋಮವಾರದಿಂದ ಎರಡು ದಿನ ನಗರದಲ್ಲಿ ಮಹತ್ವದ ಸಭೆ ನಡೆಸಲಿದ್ದು, ಇದಕ್ಕಾಗಿ ಅಳವಡಿಸಿದ್ದ ಸ್ವಾಗತ ಕೋರುವ ಫ್ಲಾಗ್ ಹಾಗೂ ಬ್ಯಾನರ್ಗಳನ್ನ ಕನ್ನಡ ಪರ ಸಂಘಟನೆಗಳು ಹರಿದು ಹಾಕಿವೆ. ದೇಶದ ವಿವಿಧ ರಾಜ್ಯಗಳ ಬಿಜೆಪಿಯೇತರ ಪಕ್ಷಗಳು ನಾಳಿನ ಸಭೆಯಲ್ಲಿ ಭಾಗಿಯಾಗಲಿದ್ದು, ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿರುವ ಕರೆಗೆ ಬೆಂಬಲಿಸಿ ಹಲವು ನಾಯಕರು ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ವಿವಿದ ರಾಜ್ಯಗಳ ಹಾಲಿ ಹಾಗೂ ಮಾಜಿ ಮುಖ್ಯಮಂತ್ರಿಗಳು ಹಾಗೂ ರಾಷ್ಟ್ರೀಯ ನಾಯಕರು ಆಗಮಿಸುತ್ತಿರುವ ಹಿನ್ನೆಲೆ ಇವರಿಗೆ ಸ್ವಾಗತ ಕೋರಿ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಸಮೀಪದ ಖಾಸಗಿ ಹೋಟೆಲ್ ಮುಂಭಾಗ ಹಾಗೂ ದೇವನಹಳ್ಳಿ ವಿಮಾನ ನಿಲ್ದಾಣದಿಂದ ರೇಸ್ ಕೋರ್ಸ್ ರಸ್ತೆ ತಲುಪುವ ಮುಖ್ಯ ರಸ್ತೆಗಳಲ್ಲಿ ರಾಷ್ಟ್ರೀಯ ನಾಯಕರನ್ನು ಸ್ವಾಗತಿಸುವ ಫ್ಲೆಕ್ಸ್ ಬ್ಯಾನರ್ಗಳನ್ನು ಅಳವಡಿಸಲಾಗಿದೆ. ನಗರದ ಮೇಕ್ರಿ ವೃತ್ತ ಬಳಿ ಎರಡು ದಿನಗಳ ಹಿಂದೆ ಫ್ಲೆಕ್ಸ್ ಬ್ಯಾನರ್ಗಳನ್ನ ಹರಿದು ಹಾಕಿದ್ದ ಕನ್ನಡಪರ ಸಂಘಟನೆ ಮುಖಂಡರು ಇಂದು ಸಹ ವಿವಿಧಡೆ ಫ್ಲೆಕ್ಸ್ ಬ್ಯಾನರ್ ಗಳನ್ನ ಹರಿದು ಹಾಕಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





