Breaking News

ಸಿದ್ದರಾಮಯ್ಯನವರು ಸಭೆಯಲ್ಲಿ ಯಾವುದೇ ಪತ್ರ ಹರಿದಿಲ್ಲ: ಸಂತೋಷ ಲಾಡ್

ಹುಬ್ಬಳ್ಳಿ: ಖರ್ಗೆಯವರು ದೆಹಲಿಯಲ್ಲಿ ಕರೆದಿರುವ ಸಭೆಯಲ್ಲಿ ಭಾಗವಹಿಸುತ್ತೇನೆ. ಪಕ್ಷ ಸಂಘಟನೆ, ಪಾಲಿಸಿ ಮೇಕಿಂಗ್, ಲೋಕಸಭಾ ಚುನಾವಣೆ ಬಗ್ಗೆ ಚರ್ಚಿಸಲು ಕರೆದಿದ್ದಾರೆ. ಸಿದ್ದರಾಮಯ್ಯನವರು ಸಭೆಯಲ್ಲಿ ಯಾವುದೇ ಪತ್ರ ಹರಿದಿಲ್ಲ. ನಾನು ಸಭೆಯಲ್ಲಿ ಇದ್ದೆ. ಲೆಟರ್ ಹರಿದಿದ್ದಂತೂ ನಾನು ನೋಡಿಲ್ಲ. ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸ್ವೀಕರಿಸಲಾಗುತ್ತಿದೆ. ಪರಿಶೀಲಿಸಿ ಅರ್ಹ ಫಲಾನುಭವಿಗಳಿಗೆ ಹಣ ನೀಡಲಾಗುವುದೆಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.

ನಗರದಲ್ಲಿ ಮಾಧ್ಯಮದವರ ಜೊತೆ ಮಾತಾನಾಡಿದ ಅವರು, ಅಸಮಾಧಾನಗೊಂಡ ಶಾಸಕರ ಪತ್ರವನ್ನು ಸಿಎಂ ಹರಿದು ಹಾಕಿದ ಹಿನ್ನೆಲೆ, ಹಾಗೇನು ಆಗಿಲ್ಲ ಈ ಕುರಿತು ಹೆಚ್ಚಿನ ನನಗೆ ಮಾಹಿತಿ ಇಲ್ಲ. ಆಟೋ ಚಾಲಕರಿಗೆ ಕಾರ್ಮಿಕ ಕಾರ್ಡ್‌ ನೀಡುವ ಕುರಿತು ಶೀಘ್ರದಲ್ಲೇ ಕ್ರಮ ತೆಗೆದುಕೊಳ್ಳುತ್ತೇನೆ. ನಮ್ಮ ಸರ್ಕಾರ ಬಡವರ ಹಿಂದುಳಿದ ವರ್ಗಗಳ ಪರವಾಗಿದೆ. ಅಸಂಘಟಿತ ವಲಯದ ಕಾರ್ಮಿಕರಿಗೆ ಕಾರ್ಮಿಕ ಕಾರ್ಡ್ ಸೇರಿದಂತೆ ಅಗತ್ಯ ಸೌಲಭ್ಯ ಒದಗಿಸುವ ಭರವಸೆ ನೀಡಿದರು.

Share News

About BigTv News

Check Also

ಒಂದು ತಿಂಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಆರೋಪಿ ಸತೀಶ್ ಪಾತ್ರಿ..!

ಆರೋಪಿಗೆ ಠಾಣೆಯ ಮಾಹಿತಿ ಸೋರಿಕೆ ಆರೋಪ; ಕಾನ್ಸ್‌ಟೇಬಲ್ ಕಾಂತೇಶ್ ಅಮಾನತು! ಚಿಕ್ಕಮಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಪಾತ್ರಿ ಕಳೆದ …

Leave a Reply

Your email address will not be published. Required fields are marked *