Breaking News

ಅಂತರರಾಜ್ಯ ಡ್ರಗ್ಸ್ ಪೆಕ್ಟರ್‌ಗಳೊಂದಿಗೆ ನಂಟು ಹೊಂದಿದ ಆರೋಪದ ಮೇಲೆ ಹುಬ್ಬಳ್ಳಿ ಮೂಲದ ಯುವಕ ಅರೆಸ್ಟ್…

ಹುಬ್ಬಳ್ಳಿ: ಅಂತರರಾಜ್ಯ ಡ್ರಗ್ಸ್ ಪೆಕ್ಟರ್‌ಗಳೊಂದಿಗೆ ನಂಟು ಹೊಂದಿದ ಆರೋಪದ ಮೇಲೆ ಹುಬ್ಬಳ್ಳಿ ಮೂಲದ ಯುವಕನನ್ನು ತಮಿಳುನಾಡಿನ ಪೊಲೀಸರು ಬಂಧಿಸಿ ಹುಬ್ಬಳ್ಳಿ ಗ್ರಾಮೀಣ ಹಾಗೂ ಉಪನಗರ ಠಾಣೆಗೆ ಮಾಹಿತಿ ನೀಡಿದ್ದಾರೆ.

ಹುಬ್ಬಳ್ಳಿ ತಾಲೂಕಿನ ಅದರಗುಂಚಿ ಗ್ರಾಮದ ಸೂರಜಗೌಡ ಕಾನಗೌಡರ ಎಂಬಾತನೇ ಬಂಧಿತ ಆರೋಪಿಯಾಗಿದ್ದು, ನಗರದ ಜನತಾ ಬಜಾರ್‌ನಲ್ಲಿರುವ ಮೆಡಿಕಲ್ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ ಯುವಕ. ಈತ ಕಳೆದ ಹಲವು ತಿಂಗಳಿಂದ ಅಂತರರಾಜ್ಯ ಡ್ರಗ್ ಪೆಡಲರ್‌ಗಳೊಂದಿಗೆ ನಂಟು ಹೊಂದಿದ್ದು, ಈ ಹಿನ್ನೆಲೆಯಲ್ಲಿ ತಮಿಳನಾಡಿನ ಪೊಲೀಸರ ತನಿಖೆಯಿಂದ ಬಹಿರಂಗಗೊಂಡಿದೆ.

ಡ್ರಗ್ಸ್ ಪೆಡ್ಲರ್ ಜತೆ ನಂಟು ಅಲ್ಲದೇ ನಿರ್ಬಂಧಿತ ಮೆಡಿಷನ್ ಮಾರಾಟ ಮಾಡುತ್ತಿದ್ದ ಯುವಕ, ಈ ವಿಚಾರಕ್ಕೆ ಸಂಬಂಧಿಸಿದಂತೆ ತಮಿಳನಾಡಿನ ಕೊಯಮತ್ತೂರಿನ ಪೀಲಮೆಡು ಠಾಣೆ ಪೊಲೀಸರು ಅಲ್ಲಿಯ ಜಾಲವನ್ನು ಎನ್‌ಡಿಪಿಎಸ್ ಆ್ಯಕ್ಟ್ ಅಡಿ ಭೇದಿಸಿದೆ. ಈ ವೇಳೆ ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಹುಬ್ಬಳ್ಳಿ ಮೂಲದ ಸೂರಜ್‌ಗೌಡ ಅವರೊಂದಿಗೆ ನಂಟು ಹೊಂದಿರುವ ವಿಚಾರವನ್ನು ಡ್ರಗ್ ಪೆಡ್ಲರ್ ಬಾಯಿ ಬಿಟ್ಟಿದ್ದಾರೆ.

ಇನ್ನೂ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಜಾಲದ ಪತ್ತೆಗೆ ಹುಬ್ಬಳ್ಳಿಗೆ ಆಗಮಿಸಿದ್ದ ಕೊಯಮತ್ತೂರಿನ ಪೊಲೀಸರು, ನಿರ್ಬಂಧಿತ ಮೆಡಿಷನ್ ಖರೀದಿಸುವ ನೆಪದಲ್ಲಿ ಸೂರಜ್‌ಗೌಡನನ್ನು ಇಲ್ಲಿಯ ಜನತಾ ಬಜಾರ್‌ಗೆ ಕರೆಯಿಸಿಕೊಂಡು ವಿಚಾರಣೆ ಈ ವೇಳೆ ನಿರ್ಬಂಧಿತ ಮೆಡಿಷನ್ ಮಾರಾಟ ಮಾಡಲು ಬಂದು ಕೊಯಮತ್ತೂರಿನ ಪೊಲೀಸರು ತೋಡಿದ ಖೆಡ್ಡಾಕ್ಕೆ ಬಿದ್ದಿದ್ದಾನೆ.

Share News

About BigTv News

Check Also

ಕಾನೂನು ರಕ್ಷಕನೇ ಭಕ್ಷಕ..! ಪೋಕ್ಸೊ ಪ್ರಕರಣದಲ್ಲಿ ಪಿಎಸ್‌ಐ ಬಂಧನ…

ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಆರೋಪ: ಪೋಕ್ಸೊ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಯ ಬಂಧನ, ಭಟ್ಕಳ: ಸಾರ್ವಜನಿಕರ ರಕ್ಷಣೆ ಮಾಡಬೇಕಿದ್ದ ಪೊಲೀಸ್ ಅಧಿಕಾರಿಯೊಬ್ಬನೇ …

Leave a Reply

Your email address will not be published. Required fields are marked *