Breaking News

ಬಿಜೆಪಿಯಿಂದ ಕರ್ನಾಟಕ ಸರ್ಕಾರ ಅಭದ್ರಗೊಳಿಸುವುದು ಅಸಾಧ್ಯದ ಮಾತು – ದಿಗ್ವಿಜಯ ಸಿಂಗ್

40% ಭ್ರಷ್ಟ ಹಣದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಪತ ನಗೊಳಿಸಬಹುದು ಅಂದುಕೊಂಡಿದ್ದಾರೆ ಆದರೆ ಬಿಜೆಪಿ ಯಿಂದ ಕರ್ನಾಟಕ ಸರ್ಕಾರ ಅಭದ್ರಗೊಳಿಸುವುದು ಅಸಾಧ್ಯವಾದ ಮಾತು ಎಂದು ಎಐಸಿಸಿ ಪ್ರದಾನ ಕಾರ್ಯದರ್ಶಿ ದಿಗ್ವಿಜಯ ಸಿಂಗ್ ಹೇಳಿದ್ದಾರೆ. ಬಿಜೆಪಿ ದೇಶದ ಸಂವಿದಾನವನ್ನು ಬುಡಮೇಲು ಮಾಡಲು ಹೊರಟಿದ್ದಾರೆ ಅಹಂಕಾರದಿಂದ ಬಿಜೆಪಿಯವರು ಮಾತಾಡುತ್ತಿದ್ದಾರೆ ತಮ್ಮ ಬಳಿ ಜಮಾ ಇರೋ 40% ಹಣವನ್ನು ಕಾಂಗ್ರೆಸ್ ಸರ್ಕಾರ ಪತನಗೊಳಿಸಲು ಬಳಸಬೇಕೆಂದುಕೊಂಡಿದ್ದಾರೆ. ಆದ್ರೆ ಈ ಬಾರಿ ಕಾಂಗ್ರೆಸ್ ಸರ್ಕಾರವನ್ನು ಬೀಳಿಸಲು ಸಾಧ್ಯವಿಲ್ಲ ಕಾಂಗ್ರೆಸ್ ಪಕ್ಷ ಒಟ್ಟಾಗಿದೆ ಭಾರತ ಹಿಂದೂ ರಾಷ್ಟ್ರ ಎಂಬ ಕಮಲನಾಥ್ ಹೇಳಿಕೆ ವಿಚಾರ ಮಾತನಾಡಿದ ಅವರು ಕಮಲಾನಾಥ ಆ ರೀತಿ ಹೇಳಿಲ್ಲ ಭಾರತೀಯ ಸಂವಿಧಾನದಲ್ಲಿ ಎಲ್ಲ ವ್ಯಕ್ತಿಗಳಿಗೂ ತನ್ನ ಧರ್ಮ ಪಾಲನೆಗೆ ಅವಕಾಶವಿದೆ ಭಾರತದಲ್ಲಿ ಸಂವಿಧಾನವೇ ಸರ್ವಸ್ವ ಆಗಿದೆ. ಹಿಂದೂಗಳ ಜನಸಂಖ್ಯೆ ಇಲ್ಲಿ ಹೆಚ್ಚಿವೆ. ನೇಪಾಳ ಜನಸಂಖ್ಯೆಯಲ್ಲಿ ಅತಿ ಹೆಚ್ಚು ಹಿಂದುಗಳೇ ಇದ್ದಾರೆ ಆದರೆ ನೇಪಾಳ ಹಿಂದೂ ರಾಷ್ಟ್ರ ಅಂತ ಘೋಷಿಸಿಕೊಂಡಿಲ್ಲ. ಸೆಕ್ಯೂಲರ್ ಕಂಟ್ರಿಯ ಸಂವಿಧಾನ ಅಳವಡಿಸಲಾಗಿದೆ. ಪಾಕಿಸ್ತಾನ ಇಸ್ಲಾಂ ರಾಷ್ಟ ಅಂತ ಘೋಷಿಸಿಕೊಂಡ ನಂತರ ಏನಾಗಿದೆ ಅಂತ ಎಲ್ಲರಿಗೂ ಗೊತ್ತಿದೆ ಅಲ್ಲಿ ಮುಸಲ್ಮಾನರನ್ನು ಮುಸಲ್ಮಾನರೇ ಹೊಡೆದು ಹಾಕಿದ್ದಾರೆ. ಇಲ್ಲಿ ಹಿಂದೂ ರಾಷ್ಟ್ರದ ಪ್ರಶ್ನೆ ಇಲ್ಲಾ ದೇಶ ಎಲ್ಲರಿಗೂ ಒಂದೇ, ಎಲ್ಲ ಧರ್ಮದವರಿಗೂ ದೇಶದ ಸ್ವಾತಂತ್ರ್ಯ ಕ್ಕಾಗಿ ಹೋರಾಡಿದ್ದಾರೆ ಎಂದರು. ಹಿಂದುತ್ವದ ಪರಿಕಲ್ಪನೆ ತಂದವರು ಸಾವರ್ಕರ್ ಅವರೇ ಹೇಳಿದ್ದಾರೆ ಹಿದುತ್ವಕ್ಕೂ ಹಿಂದೂ ಧರ್ಮಕ್ಕೂ ಸನಾತನ ಧರ್ಮಕ್ಕೂ ಸಂಬಂಧವಿಲ್ಲ ಎದು..

ಸಂವಿಧಾನದ ಮೇಲೆ ಪ್ರಮಾಣ ಮಾಡಿ ಅಧಿಕಾರಕ್ಕೆ ಬಂದವರು ಹಿಂದುತ್ವದ ಮಾತುಗಳನ್ನು ಆಡೋದು ಸರಿಯಲ್ಲಕರ್ನಾಟಕ ಸರ್ಕಾರದಲ್ಲಿ 50% ಭ್ರಷ್ಟಾಚಾರ ಎಂಬ ಆರೋಪ ಈ ಕುರಿತು ಮುಖ್ಯ ಮಂತ್ರಿಗಳು ಮತ್ತು ಕೆಪಿಸಿಸಿ ಅಧ್ಯಕ್ಷರು ಉತ್ತರ ಕೊಡುತ್ತಾರೆ ನನಗೆ ತಿಳಿದ ಮಟ್ಟಿಗೆ ಮಧ್ಯಪ್ರದೇಶದಲ್ಲಿ ಭ್ರಷ್ಟಾಚಾರ ಶೇಕಡಾ 50ರಷ್ಟು ದಾಟಿದೆ ಮಣಿಪುರದಲ್ಲಿ ಗಲಭೆ ಮುಂದುವರಿಕೆ ವಿಚಾರ ತನ್ನ ಸ್ವಾರ್ಥಕ್ಕೆ ಬಿಜೆಪಿ ಈ ರೀತಿ ಪಿತೂರಿ ಮಾಡಿದೆ, ಮಣಿಪುರದ ತಂತ್ರವನ್ನು ಈಗ ಜಮ್ಮು – ಕ್ಕಾಶ್ಮೀರದಲ್ಲಿ ಪ್ರಯೋಗ ಮಾಡಲು ಹೊರಟಿದೆ ಇದನ್ನು ಅರ್ಥ ಮಾಡಿಕ್ಕೊಳ್ಳೋದು ಸದ್ಯದ ಅವಶ್ಯಕತೆಯಾಗಿದೆ ಎದು ದಿಗ್ವಿಜಯ್ ಸಿಂಗ್ ಹೇಳಿದರು….

Share News

About BigTv News

Check Also

ಒಂದು ಬೆಕ್ಕಿನ ಗರ್ಭ… ಎರಡು ಮನೆಗಳ ಗಲಾಟೆ! ಕೊನೆಗೆ ಪೊಲೀಸರೇ ‘ವಿಚಿತ್ರ ತೀರ್ಪು’ ಕೊಟ್ಟ ಕಥೆ!

ನಾಲ್ಕು ಮರಿಗಳು ಹುಟ್ಟಿದವು… ಆದರೆ ಕಸ್ಟಡಿ ಯಾರಿಗೆ..? ಪೊಲೀಸರನ್ನೇ ಕಂಗೆಡಿಸಿದ ಪ್ರಕರಣ! ಬೆಕ್ಕು ಗರ್ಭಿಣಿ… ನೆರೆಹೊರೆಯವರ ಗಲಾಟೆ! ಬೆಂಗಳೂರಿನಲ್ಲಿ ‘ವಿಚಿತ್ರ’ …

Leave a Reply

Your email address will not be published. Required fields are marked *