Breaking News

ಸುಳ್ಯದ ಮೂವರು ಸೇರಿ ಕರಾವಳಿ ಭಾಗದ 11 ವಿಜ್ಞಾನಿಗಳು ಮಹತ್ವದ ಯೋಜನೆಯಲ್ಲಿ ಭಾಗಿಯಾಗಿರುವುದು ವಿಶೇಷ….

ಸುಳ್ಯ: ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್ ಲ್ಯಾಂಡರ್‌ ಅನ್ನು ಸುರಕ್ಷಿತವಾಗಿ ಇಳಿಸಿದ ಕೀರ್ತಿಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ) ಪಾತ್ರವಾಗಿದೆ. ಈ ಚಂದ್ರಯಾನದ ಯಶಸ್ಸಿಗೆ ನೂರಾರು ವಿಜ್ಞಾನಿಗಳು, ತಂತ್ರಜ್ಞರು, ಇಂಜಿನಿಯರ್‌ಗಳು ಸೇರಿದಂತೆ ಅನೇಕ ಸಿಬ್ಬಂದಿ ಅವಿರತವಾಗಿ ದುಡಿದಿದ್ದಾರೆ. ಈ ತಂಡದಲ್ಲಿ ಸುಳ್ಯದ ಮೂವರು ಸೇರಿ ಕರಾವಳಿ ಭಾಗದ 11 ವಿಜ್ಞಾನಿಗಳು ಮಹತ್ವದ ಯೋಜನೆಯಲ್ಲಿ ಭಾಗಿಯಾಗಿರುವುದು ವಿಶೇಷ.

ಕಳೆದ ಹಲವು ವರ್ಷಗಳಿಂದ ಇಸ್ರೋದಲ್ಲಿ ಡಿಜಿಟಲ್ ಸ್ಟ್ರಕ್ಚರ್ ಡಿಸೈನ್ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸುಳ್ಯ ತಾಲೂಕಿನ ದುಗಲಡ್ಕದ ಮಾನಸ ಜಯಕುಮಾರ್ ಎಂಬುವರು ಮಂಗಳೂರು ವಿವಿಯಲ್ಲಿ ಮಂಗಳಗ್ರಹದ ವಿಚಾರವಾಗಿ ಸಂಶೋಧನಾ ವಿದ್ಯಾರ್ಥಿನಿಯಾಗಿದ್ದಾರೆ. ಮಾರ್ಚ್ ತಿಂಗಳಲ್ಲಿ ಗುಜರಾತ್‌ನ ಅಹಮದಾಬಾದ್​ನಲ್ಲಿ ನಡೆದ ಚಂದ್ರಯಾನ 3 ಪ್ರಾಜೆಕ್ಟ್ ವರ್ಕ್‌ಶಾಪ್‌ನಲ್ಲಿ ಕರ್ನಾಟಕದಿಂದ ಆಯ್ಕೆಯಾಗಿ ಭಾಗವಹಿಸಿದ್ದರು. ಚಂದ್ರಯಾನ 3 ಉಪಗ್ರಹದ ಆ್ಯಂಟೆನಾ ತಯಾರಿಕೆಯ 5 ಜನರ ತಂಡದಲ್ಲಿ ಮಾನಸ ಜಯಕುಮಾರ್ ಕೂಡ ಒಬ್ಬರಾಗಿದ್ದರು.

Share News

About BigTv News

Check Also

ಧಾರವಾಡದಲ್ಲಿ ದಾಳಿ ದಂಧೆ!ಯುವ ಕಾಂಗ್ರೆಸ್ ಮುಖಂಡ ಪೈರೋಜ್‌ಖಾನ ಪಠಾಣ ಮನೆಗೆ ನುಗ್ಗಿ ಹತ್ಯೆ…

Big Breaking:ಮನೆಯೊಳಗೆ ನುಗ್ಗಿ ಯುವ ಕಾಂಗ್ರೆಸ್ ನಾಯಕರ ಕೊಲೆ – ಧಾರವಾಡದಲ್ಲಿ ಆತಂಕ ಧಾರವಾಡ: ನಗರದಲ್ಲಿ ಬೆಚ್ಚಿಬೀಳಿಸುವ ಬರ್ಬರ ಹತ್ಯೆ …

Leave a Reply

Your email address will not be published. Required fields are marked *