ಬೆಂಗಳೂರು :ಕ್ರೆಡಿಟ್ ಕಾರ್ಡ್ ಸಂಪೂರ್ಣ ಮೊತ್ತವನ್ನು ಪಾವತಿಸಿದ ಬಳಿಕವೂ 6 ಸಾವಿರ ರೂ. ಪಾವತಿ ಮಾಡುವಂತೆ ಗ್ರಾಹಕರೊಬ್ಬರಿಗೆ ಸೂಚನೆ ನೀಡಿದ್ದ ಖಾಸಗಿ ಬ್ಯಾಂಕ್ವೊಂದಕ್ಕೆ ಗ್ರಾಹಕರ ನ್ಯಾಯಾಲಯವು 5 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ. ಅಲ್ಲದೇ, ನೋ ಡ್ಯೂ ಸರ್ಟಿಫಿಕೆಟ್ ನೀಡುವಂತೆ ಸೂಚನೆ ನೀಡಿದ್ದಲ್ಲದೇ, ದಂಡದ ಮೊತ್ತವನ್ನು ಆದೇಶ ಪ್ರತಿ ಲಭ್ಯವಾದ 45 ದಿನಗಳಲ್ಲಿ ಪಾವತಿಸಬೇಕು. ಇಲ್ಲವಾದಲ್ಲಿ ಮಾಸಿಕ ಶೇಕಡಾ 9ರಷ್ಟು ಬಡ್ಡಿಯೊಂದಿಗೆ ಪಾವತಿ ಮಾಡಬೇಕು ಎಂದು ನಿರ್ದೇಶನ ನೀಡಿದೆ.ಬೆಂಗಳೂರಿನ ಆಶೋಕ ನಗರದ ಹಿರಿಯ ನಾಗರಿಕರಾದ ಪಿ.ವಿ. ರಮೇಶ್ ಕುಮಾರ್ ಸಲ್ಲಿಸಿದ್ದ

ದೂರನ್ನು ವಿಚಾರಣೆ ನಡೆಸಿದ ನಗರದ 3ನೇ ಹೆಚ್ಚುವರಿ ಗ್ರಾಹಕರ ಪರಿಹಾರ ವೇದಿಕೆಯ ಅಧ್ಯಕ್ಷರಾದ ಕೆ. ಶಿವರಾಮ ಮತ್ತು ಸದಸ್ಯರಾದ ಚಂದ್ರಶೇಖರ್ ಎಸ್. ನೋಲ ಅವರಿದ್ದ ಪೀಠ ಈ ಆದೇಶ ಮಾಡಿದೆ. ದೂರುದಾರರ ಕ್ರೆಡಿಟ್ ಕಾರ್ಡ್ನಲ್ಲಿ 35 ಪೈಸೆ ಬಾಕಿಯಿದೆ ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ವಿಚಾರಣೆಯಲ್ಲಿ 595 ರೂ.ಗಳನ್ನು ಪಾವತಿಸಿಕೊಂಡಿದ್ದಾರೆ. ಇದಾದ ಬಳಿಕ ವಿನಾಕಾರಣ 6 ಸಾವಿರ ರೂ. ಬಾಕಿಯಿದೆ ಎಂಬುದಾಗಿ ಬ್ಯಾಂಕ್ ತಿಳಿಸಿದೆ. ಅಲ್ಲದೆ, ದೂರುದಾರರಿಗೆ ಬ್ಯಾಂಕ್ನವರು ಪದೇ ಪದೆ ಕರೆ ಮಾಡಿ ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

