Breaking News

ಕರ್ನಾಟಕ ಸರ್ಕಾರವು ಆಸ್ತಿಗಳ ಮಾರ್ಗಸೂಚಿ ದರವನ್ನು ಪ್ರಸ್ತುತ ಮೌಲ್ಯಕ್ಕೆ 25 ರಿಂದ 30 ರಷ್ಟು ಏರಿಕೆ ಮಾಡಿದೆ…..

ಬೆಂಗಳೂರು: ಅಕ್ಟೋಬರ್ 1 ರಿಂದ ಬೆಂಗಳೂರಿನ ಭೂಮಿ ಹಾಗೂ ಫ್ಲಾಟ್‌ಗಳ ಬೆಲೆಗಳಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರವು ಆಸ್ತಿಗಳ ಮಾರ್ಗಸೂಚಿ ದರವನ್ನು ( Guidance value ) ಹೆಚ್ಚಿಸುವುದಾಗಿ ಘೋಷಿಸಿದ್ದರಿಂದ ಆಸ್ತಿ ಮೌಲ್ಯದಲ್ಲಿ ಏರಿಕೆ ಕಂಡುಬಂದಿದೆ.

ಕರ್ನಾಟಕ ಸರ್ಕಾರವು ಆಸ್ತಿಗಳ ಮಾರ್ಗಸೂಚಿ ದರವನ್ನು ಪ್ರಸ್ತುತ ಮೌಲ್ಯಕ್ಕೆ 25 ರಿಂದ 30 ರಷ್ಟು ಏರಿಕೆ ಮಾಡಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಾದ್ಯಂತ ಪ್ರಾಪರ್ಟಿ ಬೆಲೆಗಳು ಭಾನುವಾರದಿಂದ ಏರಿಕೆಯಾಗಲು ಪ್ರಾರಂಭಿಸಿವೆ. ಕಳೆದ ಐದು ವರ್ಷಗಳಿಂದ ಆಸ್ತಿಗಳ ಮಾರ್ಗಸೂಚಿ ದರಗಳಲ್ಲಿ ಯಾವುದೇ ಬದಲಾವಣೆ ಮಾಡದೇ ಇರುವುದರಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿದೆ.

ಸ್ಥಳೀಯ ಮಾರುಕಟ್ಟೆ ದರಗಳನ್ನು ಅವಲಂಬಿಸಿ ಸರ್ಕಾರವು ನಿಗದಿಪಡಿಸಿದ ಆಸ್ತಿಯ ಕನಿಷ್ಠ ಮಾರಾಟ ಬೆಲೆಯನ್ನು ಆಸ್ತಿಗಳ ಮಾರ್ಗಸೂಚಿ ದರವೆಂದು ಪರಿಗಣಿಸಲಾಗುತ್ತದೆ

Share News

About BigTv News

Check Also

ಹೆಸ್ಕಾಂ ಎಇಇ ದಂಪತಿ ಮನೆ-ಕಚೇರಿಗೆ ಲೋಕಾಯುಕ್ತ ದಾಳಿ..! ಅಪಾರ ಚಿನ್ನ, ನಗದು ಪತ್ತೆ ಶಂಕೆ..

ಬೆಳ್ಳಂಬೆಳಗ್ಗೆ ಕರೆಂಟ್ ಅಧಿಕಾರಿಗಳಿಗೆ ಶಾಕ್..! ಅಕ್ಷಯ ಕಾಲೋನಿ ಮನೆಯಲ್ಲಿ ಚಿನ್ನದ ರಾಶಿ..? ಗೋಲ್ಡ್ ಸ್ಮಿತ್ ಕರೆಸಿ ತೂಕ ಹಾಕಿಸಿದ ಲೋಕಾಯುಕ್ತರು..! …

Leave a Reply

Your email address will not be published. Required fields are marked *